ಕರ್ನಾಟಕದ ಭೂಮಿಕಾ ಮೂರ್ತಿ ಹಾಗೂ ಗಗನ್ ಮೂರ್ತಿ ಸೇರಿದಂತೆ ದಿಟ್ಟ ಸಾಹಸ ತೋರಿರುವ 20 ಮಕ್ಕಳಿಗೆ 2008ರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ.ಇವರಲ್ಲಿ ಕಳೆದ ಸೆಪ್ಟೆಂಬರ್ 13ರಂದು ದೆಹಲಿ ಸ್ಫೋಟ ನಡೆಸಲಾದ ವೇಳೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿ ಬೆಲೂನು ಮಾರುವ ಹುಡುಗ ರಾಹುಲ್ ಸೇರಿದ್ದಾನೆ.ಈ ಹುಡುಗ ಪೊಲೀಸರಿಗೆ ತನಿಖೆಯಲ್ಲಿ ಸಹಕರಿಸಿದ್ದ ಮಾತ್ರವಲ್ಲದೆ, ಶಂಕಿತ ಉಗ್ರರ ಸ್ಕೆಚ್ ತಯಾರಿಸಲು ಸಹಾಯ ನೀಡಿದ್ದ.ಇದಲ್ಲದೆ, ರಾಜಸ್ಥಾನದ ಅಶಿ ಕನ್ವರ್, ಕೃತಿಕ ಜಾನ್ವರ್, ಹೀನಾ ಕುರೇಶಿ, ಮೇಘಾಲಯದ ಸಿಲ್ವರ್ ಖರ್ಬಾನಿ, ಪಶ್ಚಿಮ ಬಂಗಾಳದ ಅನಿತ ಕೋರಾ ಹಾಗೂ ರೀನಾ ಕೋರಾ, ಕೇರಳದ ದಿನು ಮತ್ತು ಮಂಜೂಷಾ, ಮಣಿಪುರದ ವೈ. ಅಡ್ಡಿಸನ್ ಸಿಂಗ್, ಉತ್ತರ ಪ್ರದೇಶದ ಶಹಂಸ, ಮಹಾರಾಷ್ಟ್ರದ ವಿಶಾಲ್ ಪಾಟಿಲ್, ತಮಿಳ್ನಾಡಿನ ಮಾರುಡು ಪಂಡಿ, ಛತ್ತೀಸ್‌ಗಢದ ಮನಿಶ್ ಬನ್ಸಾಲ್ ಹಾಗೂ ಹರ್ಯಾಣದ ಮನಿಶ್ ಬನ್ಸಾಲ್ ಅವರುಗಳಿಗೂ ಪ್ರಶಸ್ತಿ ಪಡೆಯಲಿರುವ ಇತರರು.ಈ ಮಕ್ಕಳಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಇತರ ಪ್ರಮುಖರು ಗೌರವ ಕೂಟ ಹಮ್ಮಿಕೊಳ್ಳಲಿದ್ದಾರೆ. ಈ ಮಕ್ಕಳಿಗೆ ತಮ್ಮ ಶಾಲಾವಿದ್ಯಾಭ್ಯಾಸದ ತನಕ ಹಣಕಾಸು ಸಹಾಯ ಒದಗಿಸಲಾಗುವುದು. ಶೌರ್ಯ ಪ್ರಶಸ್ತಿ ಪಡೆದ ಮಕ್ಕಳಿಗೆ ವೈದ್ಯಕೀಯ, ಎಂಜೀನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಇಂತಹ ಮಕ್ಕಳಿಗಾಗಿ ಕೆಲವು ಸ್ಥಾನಗಳನ್ನು ಭಾರತ ಸರ್ಕಾರ ಕಾದಿರಿಸಿದೆ.ರಾಹುಲ್ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ |