ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಮುಖ್ಯಾಂಶಗಳು:
* ವಿಶ್ವದಲ್ಲೇ ಎರಡನೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆಯ ಶಕ್ತಿಯಾಗಿ ಭಾರತ
* ಈ ಹಣಕಾಸು ವರ್ಷದಲ್ಲಿ ಆರ್ಥಿಕತೆ ಪ್ರಗತಿ ಶೇ.7.1. ವೃದ್ಧಿ ನಿರೀಕ್ಷೆ
* 2008-09ರಲ್ಲಿ 37 ಮೂಲಸೌಕರ್ಯ ಯೋಜನೆಗಳಿಗಾಗಿ ಸರಕಾರದಿಂದ 70 ಸಾವಿರ ಕೋಟಿ ರೂ. ವ್ಯಯ
* ಖಾಸಗಿ-ಸಾರ್ವಜನಿಕ ಸಹಭಾಗಿತ್ವ ನೀತಿಯಡಿ, 56 ಕೇಂದ್ರೀಯ ಮೂಲಸೌಕರ್ಯ ಯೋಜನೆಗಳಿಗೆ ಅಸ್ತು
* ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಯೋಜನೆಗಳ ವೆಚ್ಚದ ಅಂದಾಜು 67,700 ಕೋಟಿ ರೂ.
* ಮಾರ್ಚ್ ಅಂತ್ಯದೊಳಗೆ 10 ಸಾವಿರ ಕೋಟಿ ರೂ. ಸಂಗ್ರಹಿಸಲಿರುವ ಭಾರತ ಮೂಲಸೌಕರ್ಯ ಹಣಕಾಸು ಸಂಸ್ಥೆ
* ಭಾರತವು ಹಣದುಬ್ಬರ ಬಿಕ್ಕಟ್ಟಿನಿಂದ ಪಾರಾಗಿದೆಯಾದರೂ, ಪೂರ್ಣ ಸಂತೃಪ್ತವಾಗಿಲ್ಲ
* ದೇಶದ ಕೃಷಿ ಕ್ಷೇತ್ರವು ಆಶಾದಾಯಕವಾಗಿ ಪ್ರಗತಿ ಸಾಧಿಸಿದ್ದು, ಆ ಕ್ಷೇತ್ರದ ಅಭಿವೃದ್ಧಿಗೆ ಏಕೀಕೃತ ಗಮನ
* ಕೃಷಿ ವಲಯಕ್ಕೆ ಯೋಜನಾ ವೆಚ್ಚವನ್ನು ಕಳೆದ ಐದು ವರ್ಷಗಳಲ್ಲಿ ಶೇ.300ರಷ್ಟು ಏರಿಸಲಾಗಿದೆ
* ಅಲ್ಪಾವಧಿ ಕೃಷಿ ಸಾಲವು ಮೂರು ಪಟ್ಟು ಹೆಚ್ಚಳಗೊಂಡು 2,50,000 ಕೋಟಿ ರೂ.ಗೆ ತಲುಪಿದೆ
* 65,300 ಕೋಟಿ ರೂ. ಮೊತ್ತದ ಕೃಷಿ ಸಾಲ ಮನ್ನಾ ಮಾಡಲಾಗಿದೆ
* ಕೃಷಿಕರಿಗೆ ಹೆಚ್ಚುವರಿ ಸಬ್ಸಿಡಿ ನೀಡುವುದನ್ನು ಸರಕಾರ ಮುಂದುವರಿಸಲಿದೆ
* ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಮೊತ್ತ 5500 ಕೋಟಿ ರೂ.ಗಳಿಂದ 14,000 ಕೋಟಿ ರೂ.ಗೆ ಹೆಚ್ಚಳ
* ಉನ್ನತ ವಿದ್ಯಾಭ್ಯಾಸದ ಹೂಡಿಕೆ ಪ್ರಮಾಣ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಶೇ.900ರಷ್ಟು ಹೆಚ್ಚಳ
* ದೇಶದ ಸಾಮಾಜಿಕ ಭದ್ರತಾ ಜಾಲದ ಬಲಪಡಿಸುವಿಕೆ
* 18ರಿಂದ 40 ವರ್ಷ ಪ್ರಾಯದೊಳಗಿನ ಯುವ ವಿಧವೆಯರಿಗೆ ಹೊಸ ಯೋಜನೆ
* 18ರಿಂದ 40 ವರ್ಷದೊಳಗಿನವರಿಗೆ ಹೊಸದಾದ ಅಂಗವೈಕಲ್ಯ ಪಿಂಚಣಿ ಯೋಜನೆ
* ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣಕ್ಕಾಗಿ 15 ಅಂಶಗಳ ಕಾರ್ಯಕ್ರಮ
* 32.4 ಶತಕೋಟಿ ಡಾಲರ್ ದಾಖಲೆ ಮೊತ್ತದ ವಿದೇಶೀ ನೇರ ಹೂಡಿಕೆಗೆ ಅವಕಾಶ
* ಜಾಗತಿಕ ಹಣಕಾಸು ಪರಿಸ್ಥಿತಿ ಪೂರಕವಾಗಿಲ್ಲ
* ಸಾಮಾನ್ಯ ಬಜೆಟ್‌ನಲ್ಲಿ ಹೆಚ್ಚುವರಿ ಹಣಕಾಸು ಸಂಬಂಧಿತ ಕ್ರಮಗಳ ಅಗತ್ಯವಿದೆ
* ಹಣಕಾಸು ವಲಯದ ಸುಧಾರಣೆಗಳಿಗೆ ವೇಗ ನೀಡಬೇಕಾಗಿದೆ
* ಸಾರ್ವಜನಿಕ ವಲಯ ಬ್ಯಾಂಕುಗಳ ಅನುತ್ಪಾದಕ ಆಸ್ತಿಯ ಪ್ರಮಾಣದಲ್ಲಿ ಕುಸಿತ
* ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲಿ ಶೇ.7.8ರಿಂದ ಶೇ.2.3ಕ್ಕೆ ಕುಸಿದಿದೆ
* ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಕೈಗಾರಿಕೆಗಲ ಸಂಖ್ಯೆ 73ರಿಂದ 58ಕ್ಕೆ ಇಳಿಕೆ
* ಲಾಭದಲ್ಲಿರುವ ಘಟಕಗಳ ಸಂಖ್ಯೆ 143ರಿಂದ 158ಕ್ಕೆ ಏರಿಕೆ
* ಕಳೆದ ಮೂರು ವರ್ಷಗಳಲ್ಲಿ, ಭಾರತದ ಸರಾಸರಿ ಅಭಿವೃದ್ಧಿ ಶೇ.9
* ತಲಾ ಆದಾಯದ ಪ್ರಮಾಣವು ವಾರ್ಷಿಕ ಶೇ.4.7 ಏರಿಕೆ
* ಆದಾಯ ಕೊರತೆ ಪ್ರಮಾಣವು ಶೇ.4.5ರಿಂದ ಶೇ.2.7ಕ್ಕೆ ಇಳಿಕೆಯ ಸಾಧನೆ
* ಕಂದಾಯ ಕೊರತೆಯ ಪ್ರಮಾಣವು ಶೇ.3.6ರಿಂದ ಶೇ.1.1ಕ್ಕೆ ಇಳಿಕೆ
* ವಾರ್ಷಿಕ ಶೇ.26.4ರಷ್ಟು ರಫ್ತು ಪ್ರಮಾಣದಲ್ಲಿ ಹೆಚ್ಚಳ
* ವಿದೇಶೀ ವ್ಯವಹಾರ ಶೇ.27.3ರಿಂದ ಶೇ.35.5ಕ್ಕೆ ವೃದ್ಧಿ
* ಒಟ್ಟು ದೇಶೀ ಉತ್ಪಾದನೆ ಅನುಪಾತದ ತೆರಿಗೆ ಪ್ರಮಾಣವು ಶೇ.9.2ರಿಂದ ಶೇ.12.5ಕ್ಕೆ ಏರಿಕೆ
* ಕೃಷಿ ಕ್ಷೇತ್ರದಲ್ಲಿ ವಾರ್ಷಿಕ ಶೇ.3.7ರ ವೃದ್ಧಿ
* 2009-10 ವರ್ಷದ ಯೋಜನಾ ವೆಚ್ಚ 2,82,957 ಕೋಟಿ ರೂ.ಗೆ ಮರುನಿಗದಿ
* ಕೇಂದ್ರೀಯ ಯೋಜನೆಗಳನ್ನು ಟೆಲಿಕಾಂ, ಗ್ರಾಮೀಣಾಭಿವೃದ್ಧಿಗೂ ವಿಸ್ತರಣೆ
* ತೆರಿಗೆ ಸಂಗ್ರಹ ಪ್ರಮಾಣವು 6,27,949 ಕೋಟಿ ರೂ.ಗೆ ಇಳಿಕೆಯಾಗುವ ನಿರೀಕ್ಷೆ |