ಅತ್ತ ಸ್ಲಮ್ ಹುಡುಗಿ ರುಬಿನಾ ಅಲಿಯ 'ಅಮ್ಮಂದಿರು' ರುಬಿನಾಳನ್ನು ಬೆಳೆಸಿದ್ದು ಯಾರೆಂದು ಹೊಯ್ ಕೈ ಮಾಡಿದ್ದರೆ, ಇತ್ತ ಸ್ಲಮ್ ಹುಡುಗ ಅಜರುದ್ದೀನ್ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಲಾಸ್ ಏಂಜಲೀಸ್‌ನಿಂದ ಹಿಂತಿರುಗುತ್ತಿರುವಂತೆಯೇ ಆತನ ಅಪ್ಪ ಕ್ಷುಲ್ಲಕ ಕಾರಣಕ್ಕಾಗಿ ಥಳಿಸಿರುವುದಾಗಿ ವರದಿಯಾಗಿದೆ. ತಾನು ಹಾಗು ಇನ್ನಿತರ ತನ್ನ ಸ್ನೇಹಿತರು ನಟಿಸಿದ ಸ್ಲಮ್‌ಡಾಗ್ ಮಿಲಿಯನೇರ್ ಸಿನಿಮಾವು ಎಂಟು ಆಸ್ಕರ್ ಪ್ರಶಸ್ತಿ ಪಡೆದ ಅಪೂರ್ವ ಕ್ಷಣಗಳನ್ನು ಕಣ್ಣಲ್ಲಿ ತುಂಬಿಕೊಂಡು ಸಂತೋಷದಿಂದ ಲಾಸ್‌ಏಂಜಲೀಸ್‌ನಿಂದ ಬಂದಿಳಿದ 10ರ ಹರೆಯದ ಬಾಲಕನಿಗೆ ಅಪ್ಪ ಮೊಹಮ್ಮದ್ ಇಸ್ಮಾಯಿಲ್, ಕೆನ್ನೆಗೆ ಬಾರಿಸಿ ತನ್ನ ನೆರೆಹೊರೆಯವರ ಎದುರೇ ಎಳೆದಾಡಿ ಕಾಲಿನಿಂದ ಒದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಅಪ್ಪನ ಕೃತ್ಯದಿಂದ ನೊಂದ ಪುಟ್ಟ ಹುಡುಗ ಕಣ್ಣಲ್ಲಿ ನೀರು ತುಂಬಿಕೊಂಡು ಮನೆಯೊಳಗೆ ಓಡಿ ಮೂಲೆಯಲ್ಲಿ ಅಡಗಿನಿಂತು ಹೊಡೆಯದಿರುವಂತೆ ಅಪ್ಪನನ್ನು ಬೇಡಿಕೊಳ್ಳುತ್ತಿರುವ ದೃಶ್ಯ ಕಂಡ ನೆರೆಯವರು ದಿಗ್ಭ್ರಾಂತರಾಗಿದ್ದರು.ದೂರದಿಂದ ಪ್ರಯಾಣಿಸಿ ಬಂದಿದ್ದ ಹುಡುಗ ಕೊಂಚ ವಿಶ್ರಾಂತಿ ಬೇಕೆಂದು ಅಂದು ಶಾಲೆಗೆ ರಜೆ ಮಾಡಿದ್ದ. ಆದರೆ ಆತ ಮನೆಯಲ್ಲಿ ಉಳಿಯ ಬಯಸಿದ್ದು ಅಪ್ಪನಿಗೆ ಕೋಪ ತರಿಸಿತ್ತು. ವ್ಯಗ್ರಗೊಂಡ ಇಸ್ಮಾಯಿಲ್‌ನ ರೌದ್ರಾವತಾರ ಕಂಡ ಆತನ ಪತ್ನಿ ಮಗನಮೇಲೆ ದಾಳಿ ಮಾಡದಂತೆ ಪರಿಪರಿಯಾಗಿ ಬೇಡಿಕೊಂಡಳು." ತಾನು ಬಳಲಿದ್ದು ತನಗೆ ವಿಶ್ರಾಂತಿ ಬೇಕೆಂದು ಹೇಳಿದಾಗ ಅಜರುದ್ದೀನ್‌ನ ತಂದೆ ಅಸಂತುಷ್ಟನಾಗಿದ್ದ. ಸುದೀರ್ಘ ವಿಮಾನ ಪಯಣದ ಬಳಲಿಕೆಯಿಂದ ಚೇತರಿಸಿಕೊಳ್ಳಲು ಆತ ಶಾಲೆಗೆ ತೆರಳಿರಲಿಲ್ಲ. ಜತೆಗೆ ಎಲ್ಲರ ಕುತೂಹಲದ ಆಸಕ್ತಿ ಕಡಿಮೆಯಾಗಲಿ ಎಂಬುದಾಗಿಯೂ ಆತ ಬಯಸಿದ್ದ. ಅಜರುದ್ದೀನ್ ಹೀಗೆ ಹೇಳುತ್ತಲೇ, ಇಸ್ಮಾಯಿಲ್ ತಾಳ್ಮೆಕಳೆದುಕೊಂಡ ಎಂಬುದಾಗಿ" ಈ ಘಟನೆಯನ್ನು ಕಂಡವರು ಹೇಳುತ್ತಾರೆ.ಅದಾಗ್ಯೂ, ಅಜರುದ್ದೀನ್ ಕೊಳಗೇರಿಯಲ್ಲಿರುವ ತನ್ನ ಮನೆಗೆ ಹಿಂತಿರುಗುತ್ತಿರುವಂತೆ ಇದೇ ಇಸ್ಮಾಯಿಲ್ ಆತನ್ನು ಎತ್ತಿ ಹಿಡಿದು ಟ್ರೋಫಿಯಂತೆ ಪ್ರದರ್ಶಿಸಿದ್ದ.ಆದರೆ ಥಳಿತ, ಬಡಿತದ ಕೆಲವು ಗಂಟೆಗಳ ಬಳಿಕ ತನ್ನ ಕೃತ್ಯದಿಂದ ಪಶ್ಚಾತ್ತಾಪಗೊಂಡ ಟಿಬಿ ರೋಗಿ ಇಸ್ಮಾಯಿಲ್, ತನ್ನ ಕೃತ್ಯಕ್ಕೆ ಕ್ಷಮೆಯಾಚಿಸಿದ. "ನನ್ನ ಮಗ ಹಿಂತಿರುಗಿದ ವೇಳೆ ತನಗೆ ಗೊಂದಲ ಮತ್ತು ಒತ್ತಡ ಉಂಟಾಗಿತ್ತು. ಒಂದು ಕ್ಷಣ ಏನುಮಾಡುತ್ತಿದ್ದೇನೆ ಎಂಬುದೇ ತನಗೆ ತಿಳಿದಿರಲಿಲ್ಲ. ನನ್ನ ಮಗನನ್ನು ನಾನು ಪ್ರೀತಿಸುತ್ತೇನೆ ಮತ್ತು ಆತ ಮನೆಯಲ್ಲಿರುವುದು ತನಗೆ ಸಂತೋಷವಾಗಿದೆ" ಎಂದು ಹೇಳಿದ್ದಾನೆ.ಪೂರಕ ಓದಿಗೆ ಆಕೆ ನನ್ನ ಮಗು- ಮಿಲಿಯನೇರ್ ಹುಡುಗಿಯ ನೈಜ ತಾಯಿ ಕ್ಲಿಕ್ ಮಾಡಿ |