ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಕೆ ನನ್ನ ಮಗು- ಮಿಲಿಯನೇರ್ ಹುಡುಗಿಯ ನೈಜ ತಾಯಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಕೆ ನನ್ನ ಮಗು- ಮಿಲಿಯನೇರ್ ಹುಡುಗಿಯ ನೈಜ ತಾಯಿ
IFM
ಆಸ್ಕರ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದ ಸ್ಲಂಡಾಗ್ ಮಿಲಿಯನೇರ್ ಸಿನಿಮಾದಲ್ಲಿ ನಟಿಸಿ ದಿನಬೆಳಗಾಗುವುದರಲ್ಲಿ ಪ್ರಸಿದ್ಧಿಗೆ ಬಂದಿರುವ ಕೊಳಗೇರಿ ಬಾಲಕಿ ರುಬಿನಾ ಅಲಿಯ 'ಅಮ್ಮಂದಿರು' ಇದೀಗ ಜಟಾಪಟಿಗೆ ಇಳಿದಿದ್ದಾರೆ.

ಚಿತ್ರದ ಲತಿಕಾ ಪಾತ್ರದಲ್ಲಿ ನಟಿಸಿರುವ ರುಬಿನಾ ಇತರ ಸಿನಿಮಾ ತಾರೆಯರೊಂದಿಗೆ ಆಸ್ಕರ್ ಸಮಾರಂಭ ಹಾಗೂ ಡಿಸ್ನಿಲ್ಯಾಂಡ್‌ನಲ್ಲಿ ಭಾಗವಹಿಸಿ ಖುಷಿಖುಷಿಯಿಂದ ಇರುತ್ತಲೇ, ಇತ್ತ ಆಕೆಯ ಗರೀಬ್ ನಗರ್ ಹೋಂನಲ್ಲಿ ಆಕೆಯ ಹೆತ್ತಮ್ಮ, ಮಲತಾಯಿಯೊಂದಿಗೆ ಜಗಳಕ್ಕಿಳಿದಿದ್ದಾರೆ.

"ಇದೀಗ ಇದ್ದಕ್ಕಿದ್ದಂತೆ ರುಬಿನಾ ಸೆಲೆಬ್ರಿಟಿ ಆಗಿರುವ ಕೀರ್ತಿಯನ್ನು ಪಡೆಯಲು ರುಬಿನಾಳ ಮಲತಾಯಿ ಮುನ್ನಿ ಪ್ರಯತ್ನಿಸುತ್ತಿದ್ದಾಳೆ" ಎಂಬುದಾಗಿ ಆಕೆಯ ಹೆತ್ತ ತಾಯಿ ಖುಷಿ ರಫೀಕ್ ಖರೇಶಿ ದೂರಿದ್ದಾರೆ. "ರುಬಿನಾ ಈಗ ಸೆಲೆಬ್ರಿಟಿಯಾಗಿದ್ದಾಳೆ. ಈ ಎರಡನೆ ಹೆಂಗಸು ತಾನವಳ ತಾಯಿ ಎಂದು ಹೇಳುತ್ತಿದ್ದು, ಆಕೆಯನ್ನು ಬೆಳೆಸಿರುವ ಕೀರ್ತಿಯನ್ನು ಪಡೆಯಲು ಇಚ್ಛಿಸುತ್ತಿದ್ದಾಳೆ. ಆದರೆ, ನನ್ನ ಅತ್ತೆ ನನ್ನ ಮಗುವನ್ನು ಪೊಷಿಸಿ ಬೆಳೆಸಿದ್ದಾರೆ" ಎಂದು ಖುರೇಶಿ ಹೇಳಿದ್ದಾರೆ.

ತನ್ನ ಬಡಗಿ ಗಂಡ ಹಾಗೂ ಮೂರು ಮಕ್ಕಳನ್ನು ಐದು ವರ್ಷಗಳ ಹಿಂದೆ ತೊರೆದು ಹೋಗಿರುವ ಖುರೇಶಿ, ಇದೀಗ ನವೀ ಮುಂಬೈಯ ಬಾಡಿಗೆ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಇದೀಗ ಮಗುವಿನ ಯಶಸ್ಸಿನ ಹಿನ್ನೆಲೆಯಲ್ಲಿ ಆಕೆ ಮರಳಿ ಬರುತ್ತಿದ್ದಾರೆ ಎಂಬ ದೂರನ್ನು ಅಲ್ಲಗಳೆಯುವ ಖುರೇಶಿ, ರುಬಿನಾ ತನ್ನ ಅದೃಷ್ಟವನ್ನು ತನ್ನ ಒಡಹುಟ್ಟಿದವರೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸಿನಿಮಾವು ಆಸ್ಕರ್ ಪ್ರಶಸ್ತಿ ಗೆದ್ದಿರುವ ಸುದ್ದಿ ಹರಡುತ್ತಿರುವಂತೆ ಗರೀಬ್ ನಗರ್ ಕೊಳಗೇರಿ ಸಂಭ್ರಮ ಆಚರಣೆ ನಡೆಯುತ್ತಿರುವ ವೇಳೆ, ಖುರೇಶಿ ತನ್ನ ಮಗಳನ್ನು ನೋಡಲು ಆಗಮಿಸಿದ್ದರು ಎಂಬುದಾಗಿ ನೆರೆಯ ಯಾಕೂಬ್ ಅಬ್ದುಲ್ ಶೇಕ್ ಹೇಳುತ್ತಾರೆ. ಅಷ್ಟರಲ್ಲಿ ತಾಯಿ ಹಾಗೂ ಮಲತಾಯಿ ನಡುವೆ ಹೊಯ್ ಕೈ ನಡೆದಿದ್ದು, ಅವರು ತೊಟ್ಟಿದ್ದ ಬಟ್ಟೆಯೂ ಹರಿದುಹೋಗಿದ್ದು, ಈ ವೇಳೆ ಮಧ್ಯಪ್ರವೇಶಿಸಿದ ನೆರೆಯವರು ಇವರನ್ನು ಪ್ರತ್ಯೇಕಿಸಿದರೆನ್ನಲಾಗಿದೆ.

ನನಗೇನು ಬೇಕಿಲ್ಲ ಎಂದಿರಿರುವ ಖುರೇಶಿ, "ನಾನು ಹಣಕ್ಕಾಗಿ ಬಂದಿಲ್ಲ, ನನ್ನ ಮಗಳ ಬಗ್ಗೆ ಹೆಮ್ಮೆ ಮತ್ತು ಸಂತಸ ಉಂಟಾಗಿದೆ. ಆಕೆಯ ಯಶಸ್ಸಿಗೆ ಆಕೆಯ ಅದೃಷ್ಟ ಮತ್ತು ಮಿಲಿಯಗಟ್ಟಲೆ ಭಾರತೀಯರ ಪ್ರಾರ್ಥನೆ ಕಾರಣವೇ ವಿನಹ ಈ ಕೀರ್ತಿಯನ್ನು ಪಡೆಯಲು ಬಯಸುವ ಆಕೆಯ ಮಲತಾಯಿ ಕಾರಣವಲ್ಲ" ಎಂದಿದ್ದಾರೆ. ತನಗೇನೂ ಬೇಕಿಲ್ಲ. ಹಣ ಅಥವಾ ಉಡುಗೊರೆಗಳೂ ಬೇಡ. ರುಬಿನಾ ಇದನ್ನು ಆಕೆಯ ಸಹೋದರಿ ಸನಾ(12) ಮತ್ತು ಸಹೋದರ ಅಬ್ಬಾಸ್(8) ಜತೆ ಹಂಚಿಕೊಂಡರೆ ಸಾಕು ಎಂಬುದು ಹೆತ್ತಮ್ಮನ ಹಾರೈಕೆ.

ರಫೀಕ್‌ನ ವಕ್ರಬುದ್ಧಿಯಿಂದಾಗಿ ಆತನನ್ನು ತೊರೆದೆ ಎನ್ನುವ ಖುರೇಶಿ, ತಾನು ತನ್ನ ಮಕ್ಕಳನ್ನು ವಿಚಾರಿಸಲು ಆಗೀಗ ಬರುತ್ತಿದ್ದೆ. ತಾನು ರುಬಿನಾಳ ಸಿನಿಮಾ ಚಿತ್ರೀಕರಣಕ್ಕೂ ತೆರಳಿದ್ದೆ ಎಂದು ಹೇಳುತ್ತಾರೆ. ರುಬಿನಾ ಹಾಗೂ ಆಕೆಯ ಸಹನಟ ಅಜರ್ ಅವರುಗಳಿಗೆ ಮಹಾರಾಷ್ಟ್ರ ಸರ್ಕಾರ ಫ್ಲಾಟ್‌ಗಳನ್ನು ನೀಡುವುದಾಗಿ ಹೇಳಿದ್ದು, ಇದು ಈ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಬಹುದು ಎಂಬ ಭೀತಿಯುಂಟಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸಂಸತ್ತಿನಲ್ಲಿ ಹಣಝಣಝಣ ಅತ್ಯಂತ ಕೆಟ್ಟ ಕ್ಷಣ'
ಮುಂಬೈ ದಾಳಿ ಹಿಂದೆ ದಾವೂದ್ ಕೈವಾಡ ?
26/11: ಇಬ್ಬರು ಭಾರತೀಯರ ಪ್ರಧಾನ ಪಾತ್ರ
ಪಾಕ್‌ಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಬೇಕು: ಮೋದಿ
ಸರ್ಕಾರಿ ನೌಕರರಿಗೆ ಶೇ.6 ತುಟ್ಟಿ ಭತ್ಯೆ ಹೆಚ್ಚಳ
ಮದ್ರಾಸ್ ಘರ್ಷಣೆ: ನ್ಯಾಯಾಂಗ ತನಿಖೆಗೆ ಸುಪ್ರೀಂ ಆದೇಶ