ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಯಾವುದೇ ಧರ್ಮವನ್ನು ದೂಷಿಸಿಲ್ಲ, ಕ್ಷಮೆಯಾಚಿಸಬೇಕಿಲ್ಲ: ವರುಣ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾವುದೇ ಧರ್ಮವನ್ನು ದೂಷಿಸಿಲ್ಲ, ಕ್ಷಮೆಯಾಚಿಸಬೇಕಿಲ್ಲ: ವರುಣ್
ತನ್ನ ಭಾಷಣದಿಂದ ದಿನಬೆಳಗಾಗುವಲ್ಲಿ ರಾಷ್ಟ್ರಾದ್ಯಂತ ಬಿಸಿಬಿಸಿ ಚರ್ಚೆಯ ಸರಕಾಗಿರುವ ಬಿಜೆಪಿ ನಾಯಕ ವರುಣ್ ಗಾಂಧಿ, ತನ್ನ ಹೇಳಿಕೆಗೆ ಕ್ಷಮೆಯಾಚಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇದು ಅವರ ಪತ್ರಿಕಾ ಕಾರ್ಯದರ್ಶಿ ಆನಂದ್ ಚೌಧರಿ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿದೆ.

ತನ್ನ ಭಾಷಣವನ್ನು ತಿರುಚಲಾಗಿದೆ ಎಂದೇ ಪ್ರತಿಪಾದಿಸುತ್ತಿರುವ ವರುಣ್ "ತನ್ನ ಧರ್ಮಶ್ರದ್ಧೆಯ ಕುರಿತು ತನಗೆ ಹೆಮ್ಮೆ ಇದೆ ಮತ್ತು ಇದಕ್ಕಾಗಿ ತಾನು ವಿಶಾದಿಸುವುದಿಲ್ಲ. ನಾನೊಬ್ಬ ಗಾಂಧಿವಾದಿ, ನಾನೊಬ್ಬ ಹಿಂದು ಮತ್ತು ಅಂತೆಯೇ ಸಮನಾಗಿ ನಾನೊಬ್ಬ ಭಾರತೀಯ. ನಾನು ರಾಜಕೀಯ ಪಿತೂರಿಯ ಬಲಿಪಶು" ಎಂಬುದಾಗಿ ವರುಣ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, 'ಉದ್ರೇಕಕಾರಿ ಭಾಷಣ'ಕ್ಕೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.

ನನ್ನ ಭಾಷಣವನ್ನು ತಿರುಚಿ ತನ್ನ ಮೇಲೆ ಗೂಬೆ ಕೂರಿಸಲಾಗಿದೆ. ಇದು ಹತಾಶ ವಿರೋಧಿಗಳ ಕೃತ್ಯ, ನಾನೊಬ್ಬ ರಾಜಕೀಯ ಬಲಿಪಶು ಎಂದು ಹೇಳಿರುವ ವರುಣ್ ಇದೀಗಾಗಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ತನಗೆ ಮತೀಯ ದ್ವೇಷ ಹುಟ್ಟಿಸುವ ಇರಾದೆ ಇಲ್ಲ ಹಾಗೂ ತಾನು ಈ ಪ್ರಯತ್ನವನ್ನೂ ಮಾಡಿಲ್ಲ ಎಂದು ಮನೇಕಾ ಪುತ್ರ ಹೇಳಿದ್ದಾರೆ.

"ಟೇಪಿನಲ್ಲಿರುವ ಧ್ವನಿ ನನ್ನದಲ್ಲ, ಅದರಲ್ಲಿರುವ ಭಾಷೆ ನನ್ನದಲ್ಲ" ಎಂದು ನಿರಾಕರಿಸಿರುವ ವರುಣ್, ಸಮಾಜ ವಿರೋಧಿ ಶಕ್ತಿಗಳ ಕೈಯನ್ನು ಕತ್ತರಿಸುವುದಾಗಿ ತಾನು ಹೇಳಿದ್ದು, ಇದನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದಿದ್ದಾರೆ.

"ನನ್ನ ಧ್ವನಿಯು ಮೆದುವಾಗಿದೆ ಆದರೆ ನನ್ನ ಭಾಷಣ ಬಿತ್ತರ ವಾಗಿರುವ ತುಣುಕಿನಲ್ಲಿರುವ ಧ್ವನಿಯು 'ಅಮಿತಾಭ್ ಬಚ್ಚನ್ ಧ್ವನಿಯಂತೆ ದಪ್ಪವಾಗಿದೆ" ಎಂದು ಸಂದರ್ಶನ ಒಂದರಲ್ಲಿ ಹೇಳಿದ ವರುಣ್, ಭಾಷಣ ಮಾಡಿದ 11 ದಿವಸಗಳ ಬಳಿಕ ಇದು ಯಾಕೆ ಪ್ರಚಾರಕ್ಕೆ ಬಂದಿದೆ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಸಮಾಜವಿರೋಧಿಗಳ ಕೈಯನ್ನು ಕತ್ತರಿಸುವೆ ಎಂಬ ಹೇಳಿಕೆಯು ಅತ್ಯಂತ ಕಠಿಣವಾಗಿ ಧ್ವನಿಸಬಹುದು, ಆದರೆ ಅದು ಯಾವುದೇ ಸಮುದಾಯದ ವಿರುದ್ಧದ ಹೇಳಿಕೆಯಲ್ಲ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಪೂರಕ ಮಾಹಿತಿಗೆ:
ಭಾಷಣಕ್ಕೆ ಕ್ಷಮೆ ಯಾಚಿಸಿದ ವರುಣ್ ಗಾಂಧಿ
ವರುಣ್ ವಿರುದ್ಧ ಎಫ್ಐಆರ್ ದಾಖಲು
'ಹಿಂದೂಗಳು ಇಲ್ಲಿರಿ, ಮಿಕ್ಕವರು ಪಾಕ್‌ಗೆ ಹೋಗಿ'
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವರುಣ್ ಗಾಂಧಿ, ಭಾಷಣ, ಪಿಲಿಭಿತ್
ಮತ್ತಷ್ಟು
ಭಾಷಣಕ್ಕೆ ಕ್ಷಮೆ ಯಾಚಿಸಿದ ವರುಣ್ ಗಾಂಧಿ
ಪ್ರತಿಹುಡುಗಿಯನ್ನು ಲಕ್ಷಾಧಿಪತಿಯಾಗಿಸುವ ಆಡ್ವಾಣಿ ಕನಸು
ತಂಬಾಕು ಕಂಪೆನಿಗಳಿಗೆ ನಿರ್ಬಂಧ
ಛತ್ತೀಸ್‌ಗಡ್: ಸ್ಪೋಟಕ ವಸ್ತುಗಳ ವಶ
ಕ್ರೈಸ್ತ ಸನ್ಯಾಸಿನಿಯರ ಸ್ಥಿತಿ ದಯನೀಯ: ಕಾರ್ಡಿನಲ್
ತೃತೀಯ ರಂಗ ಅಧಿಕಾರಕ್ಕೆ ಬರಲು ಕಷ್ಟವಿದೆ