ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ವಿರುದ್ಧ ಎಫ್ಐಆರ್ ದಾಖಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ವಿರುದ್ಧ ಎಫ್ಐಆರ್ ದಾಖಲು
ನವದೆಹಲಿ: ಚುನಾವಣಾ ಆಯೋಗದ ನಿರ್ದೇಶನಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿರುವ ಪಿಲಿಭಿತ್ ದಂಡಾಧಿಕಾರಿ ಅವರು ಬಿಜೆಪಿ ಲೋಕಸಭಾ ಅಭ್ಯರ್ಥಿ ವರುಣ್ ಗಾಂಧಿ ವಿರುದ್ಧ ಅವರ ಉದ್ರೇಕಕಾರಿ ಕೋಮುವಾದಿ ಹೇಳಿಕೆಗಾಗಿ ಎಫ್ಐಆರ್ ದಾಖಲಿಸಿದ್ದಾರೆ.

ಚುನಾವಣಾ ಆಯೋಗವು, ವರುಣ್ ಗಾಂಧಿ ವಿರುದ್ಧ ಜಾಮೀನು ರಹಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮತ್ತು ಪಕ್ಷಕ್ಕೆ ನೋಟೀಸು ರವಾನಿಸುವಂತೆ ಉತ್ತರ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿದ ಬಳಿಕ ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಪ್ರಕಾರ ಎಫ್ಐಆರ್ ದಾಖಲಾಗಿದೆ. ಎರಡು ಕೋಮುಗಳ ನಡುವೆ ದ್ವೇಷ ಹುಟ್ಟಿಸುವಂತಹ ಕಾರ್ಯವನ್ನು ಈ ಸೆಕ್ಷನ್ ನಿರ್ಬಂಧಿಸುತ್ತದೆ ಮತ್ತು ಜಾಮೀನು ರಹಿತವಾಗಿದೆ.

ಆಯೋಗದ ಆದೇಶ
ತನ್ನ ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮನಬಂದಂತೆ ನಾಲಿಗೆ ಹರಿಬಿಟ್ಟಿರುವ ಆರೋಪ ಹೊತ್ತ ಬಿಜೆಪಿ ಅಭ್ಯರ್ಥಿ ವರುಣ್‌ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಚುನಾವಣಾ ಆಯೋಗ ಆದೇಶ ನೀಡಿತ್ತು.

ಉತ್ತರ ಪ್ರದೇಶದ ಪಿಲಿಭಿತ್‌ನ ದಂಡಾಧಿಕಾರಿಯವರಿಗೆ ಚುನಾವಣಾ ಆಯೋಗವು ಪ್ರಕರಣ ದಾಖಲಿಸಲು ಅಧಿಕಾರ ನೀಡಿದೆ. ಇವರು ವರುಣ್ ಭಾಷಣದ ಕುರಿತು ಆಯೋಗಕ್ಕೆ ವರದಿ ಸಲ್ಲಿಸಿದ್ದರು.

"ನಾನು ಉದ್ರೇಕಕಾರಿಯಾಗಿ ಮಾತನಾಡಿಲ್ಲ ಎಂದು ಹೇಳಿರುವ ವರುಣ್, ತನ್ನ ಭಾಷಣವಿರುವ ಸಿಡಿಯನ್ನು ತಿರುಚಲಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

"ನಾನು ನಾಳೆ ದೆಹಲಿಯಲ್ಲಿ ಪತ್ರಿಕಾಗೊಷ್ಠಿಯನ್ನು ಕರೆದು ಪ್ರತಿವಿಚಾರ ಬಗ್ಗೆ ತನ್ನ ನಿಲುವೇನು ಎಂಬ ಕುರಿತು ಸ್ಪಷ್ಟಪಡಿಸಲಿದ್ದೇನೆ. ನಾನು ಸೂಕ್ತವಾದ ಪಕ್ಷದ ವೇದಿಕೆಯಿಂದ ಮಾತನಾಡಲಿದ್ದೇನೆ" ಎಂದು ಇಂದಿರಾ ಗಾಂಧಿ ಮೊಮ್ಮಗ ವರುಣ್ ಹೇಳಿದ್ದಾರೆ.

ಅವರು ತಮ್ಮ ಭಾಷಣದಲ್ಲಿ ಮುಸ್ಲಿಮರ ವಿರುದ್ಧ ನೇರವಾದ ದಾಳಿ ಮಾಡಿದ್ದರು.

ಹೆಚ್ಚಿನ ಮಾಹಿತಿಗೆ 'ಹಿಂದೂಗಳು ಇಲ್ಲಿರಿ, ಮಿಕ್ಕವರು ಪಾಕ್‌ಗೆ ಹೋಗಿ' ಓದಿ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದಿನ ಸಿಇಸಿ ಸಭೆಗೂ ಹಾಜರಾಗದ ಜೇಟ್ಲಿ
ಹೊಸ ಹೆಸರಿನ ತಲಾಶೆಯಲ್ಲಿ ತೃತೀಯ ರಂಗ
ಮುಸ್ಲಿಮರಿಗೆ ನಟ ಸಂಜಯದತ್ ಮಸ್ಕಾ
'ಹಿಂದೂಗಳು ಇಲ್ಲಿರಿ, ಮಿಕ್ಕವರು ಪಾಕ್‌ಗೆ ಹೋಗಿ'
ತೃತೀಯ ರಂಗಕ್ಕಿಲ್ಲ: ಅಸ್ಸಾ ಗಣ ಪರಿಷತ್
ಮುಸ್ಲಿಂಮರ ಕ್ಷೇಮಾಭಿವೃದ್ಧಿ: ರಾಜ್‌ ಭರವಸೆ