ಹಲವು ಟಿವಿ ಚಾನೆಲ್‌ಗಳ ಚುನಾವಣೋತ್ತರ ಸಮೀಕ್ಷೆಗಳ ಹಾದಿಯಲ್ಲಿ ಎನ್‌ಡಿಟಿವಿ ಚಾನೆಲ್ ನಡೆಸಿದ ಸಮೀಕ್ಷೆಯ ಫಲಿತಾಂಶವೂ ಹೊರಬಿದ್ದಿದ್ದು, ಅದರ ಪ್ರಕಾರ, ಯುಪಿಎ 216 ಸ್ಥಾನಗಳೊಂದಿಗೆ ಅತಿದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಲಿದೆ.ಎನ್‌ಡಿಎಗೆ ಕೇವಲ 177 ಸ್ಥಾನಗಳು ದೊರೆಯಲಿವೆ, ತೃತೀಯ ರಂಗವು 105 ಸ್ಥಾನ, ಚತುರ್ಥ ರಂಗ 30 ಹಾಗೂ ಇತರರು 15 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.ಬೇರೆ ಬೇರೆ ಚಾನೆಲ್‌ಗಳು ಏನನ್ನುತ್ತವೆ? ಇಲ್ಲಿ ಕ್ಲಿಕ್ ಮಾಡಿ.
ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಪ್ರಮುಖವಾಗಿ ಇರುವ ತೃತೀಯ ರಂಗವು 85ರಲ್ಲಿ 28 ಸ್ಥಾನಗಳನ್ನು ಬಾಚಿಕೊಳ್ಳಲಿದೆ. ಸಮಾಜವಾದಿ ಪಕ್ಷವಿರುವ ಚತುರ್ಥ ರಂಗವು 23 ಸ್ಥಾನಗಳನ್ನು (2004ಕ್ಕಿಂತ 12 ಸ್ಥಾನ ನಷ್ಟ) ಪಡೆದುಕೊಳ್ಳಲಿದೆ. ಅಂತೆಯೇ ಎನ್‌ಡಿಎ 14 ಹಾಗೂ ಯುಪಿಎ 13 ಸ್ಥಾನಗಳನ್ನು ಪಡೆಯಲಿವೆ ಎನ್ನುತ್ತದೆ ಸಮೀಕ್ಷೆ.ಮಹಾರಾಷ್ಟ್ರದ 48 ಸ್ಥಾನಗಳಲ್ಲಿ ಕಳೆದ ಬಾರಿಗಿಂತ 6 ಸ್ಥಾನ ನಷ್ಟ ಅನುಭವಿಸಲಿರುವ ಎನ್‌ಡಿಎಗೆ ಈ ಬಾರಿ 19 ಹಾಗೂ 2004ಕ್ಕಿಂತ ಏಳು ಸ್ಥಾನ ಹೆಚ್ಚಿಸಿಕೊಳ್ಳಲಿರುವ ಯುಪಿಎಗೆ 29 ಸ್ಥಾನ ಲಭಿಸಲಿವೆ ಎಂದಿದೆ ಸಮೀಕ್ಷೆ. |