ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ-ವೊರ್ಲಿ ಸಮುದ್ರ ಸೇತುವೆ ಇಂದು ಲೋಕಾರ್ಪಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ-ವೊರ್ಲಿ ಸಮುದ್ರ ಸೇತುವೆ ಇಂದು ಲೋಕಾರ್ಪಣೆ
PTIPTI
1600 ಕೋಟಿ ರೂ. ವೆಚ್ಚದ 5.6 ಕಿಮೀ ಉದ್ದದ, ಮುಂಬೈನ ಬಾಂದ್ರಾ-ವೊರ್ಲಿ ನಡುವೆ ಸಮುದ್ರದ ಮ‌ೂಲಕ ಸಂಪರ್ಕ ಕಲ್ಪಿಸುವ ಭಾರತದ ಪ್ರಥಮ ತೆರೆದ 8 ಲೇನ್ ಸಮುದ್ರ ಸೇತುವೆ ಮಂಗಳವಾರ ಸಂಜೆ ಅನಾವರಣಗೊಂಡಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಸಮುದ್ರಸೇತುವೆಯ ಉದ್ಘಾಟನೆ ನೆರವೇರಿಸಿದರು. ಮುಂಬೈ ತೂಗುಸೇತುವೆಗೆ ರಾಜೀವ್ ಗಾಂಧಿ ಹೆಸರನ್ನು ಇಡಲಾಗಿದ್ದು, ಶರದ್ ಪವಾರ್ ಈ ಹೆಸರನ್ನು ಸೂಚಿಸಿದ ಬಳಿಕ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಸಮ್ಮತಿಸಿದರು.

ಸುಮಾರು 10 ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಣ ಆರಂಭಿಸಲಾಗಿದ್ದು, ಅನೇಕ ಅಡೆತಡೆಗಳಿಂದ ಸೇತುವೆ ಉದ್ಘಾಟನೆಗೆ ಐದು ವರ್ಷಗಳ ವಿಳಂಬ ಉಂಟಾಯಿತು.ಈ ಸೇತುವೆಯನ್ನು ಪ್ರಸಕ್ತ ಮಹೀಮ್ ಕಾಸ್‌‌ವೇಗೆ ಪರ್ಯಾಯ ಮಾರ್ಗವೆಂದು ಹೇಳಲಾಗಿದೆ. ಪ್ರಸಕ್ತ ಬಾಂದ್ರಾ-ವೊರ್ಲಿ ನಡುವೆ ಪ್ರತಿದಿನ 14 ಲಕ್ಷ ವಾಹನಗಳು ಸಂಚರಿಸುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆಯ ದಟ್ಟಣೆಯ ಅವಧಿಯಲ್ಲಿ ವಿಪರೀತ ಒತ್ತಡ ಉಂಟಾಗಿತ್ತು.

ತಾಂತ್ರಿಕ ಸೋಜಿಗ

ಬಾಂದ್ರಾ-ವೊರ್ಲಿ ನಡುವೆ ಬೆಳಿಗ್ಗೆ-ಸಂಜೆ ಜನದಟ್ಟಣೆಯ ಅವಧಿಗಳಲ್ಲಿ 8 ಕಿಮೀ ದೂರವನ್ನು ತಲುಪಲು ಪ್ರಸಕ್ತ 60-90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆಂದು ಹೇಳಲಾಗಿದೆ. ಬಾಂದ್ರಾ-ವೊರ್ಲಿ ಸಮುದ್ರ ಸಂಪರ್ಕ ಮಂಗಳವಾರ ಕಾರ್ಯಾರಂಭವಾದ ಬಳಿಕ ಪ್ರಯಾಣದ ವೇಳೆ ಕೇವಲ 6ರಿಂದ 8 ನಿಮಿಷಗಳ ಕಡಿಮೆ ಅವಧಿ ಸಾಕಾಗುತ್ತದೆ ಮತ್ತು ವರ್ಷಕ್ಕೆ ಒಂದು ಶತಕೋಟಿ ರೂಪಾಯಿ ವಾಹನಗಳ ನಿರ್ವಹಣೆ ವೆಚ್ಚದಲ್ಲಿ ಉಳಿತಾಯವಾಗಲಿದೆ ಎಂದು ಮಹಾರಾಷ್ಟ್ರ ಅಭಿವೃದ್ಧಿ ನಿಗಮದ ಅಧಿಕಾರಿ ತಿಳಿಸಿದ್ದಾರೆ.

ಈ ಬೃಹತ್ ನಿರ್ಮಾಣದ ಮುಖ್ಯ ಆಕರ್ಷಣೆಯೆಂದರೆ ಮೀನುಗಾರ ದೋಣಿಗಳು ಹಾದುಹೋಗಲು ಉತ್ತರ ದಿಕ್ಕಿನಲ್ಲಿ 500 ಮೀಟರ್ ಉದ್ದದ ಸೇತುವೆ ಮತ್ತು ದಕ್ಷಿಣದ ಕಡೆ 350 ಮೀಟರ್ ಉದ್ದದ ಸೇತುವೆ ನಿರ್ಮಿಸಿರುವುದು. ಪ್ರತಿಯೊಂದು ತಲಾ 126 ಮೀಟರ್ ಎತ್ತರದ ಅಥವಾ 43 ಮಹಡಿಗಳ ಕಟ್ಟಡದಷ್ಟು ಎತ್ತರವಾದ ಎರಡು ಟವರ್‌ಗಳು ಸೇತುವೆಗೆ ಆಧಾರಸ್ತಂಭವಾಗಿ ನಿಂತಿವೆ.

ಎಂಎಸ್‌ಆರ್‌ಡಿಸಿ ಟವರ್ ಮೇಲ್ಭಾಗದಲ್ಲಿ ವೀಕ್ಷಕರ ಗ್ಯಾಲರಿ ನಿರ್ಮಾಣಕ್ಕೆ ಯೋಜಿಸಿದ್ದು, ಗ್ಯಾಲರಿಯಿಂದ ಇಡೀ ನಗರದ ನೋಟ ಸಿಗಲಿದೆ. ಸೇತುವೆ ಅತ್ಯಾಧುನಿಕ ಭದ್ರತಾ ಮತ್ತು ನಿಗಾ ವ್ಯವಸ್ಥೆ ಹೊಂದಿದ್ದು, ಹಿಂದುಸ್ಥಾನ್ ನಿರ್ಮಾಣ ಕಂಪೆನಿಯಿಂದ ಸ್ಥಾಪನೆಯಾಗಿದ್ದು, ವಿವಿಧ ತೊಡಕುಗಳಿಂದ ಐದು ವರ್ಷಗಳ ವಿಳಂಬವಾಗಿದೆ.ಈ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಭಾರತೀಯ ಉಕ್ಕುಪ್ರಾಧಿಕಾರ ಕಟ್ಟಡಕ್ಕೆ ಬಳಸಿರುವ ಮ‌ೂರನೇ ಎರಡರಷ್ಟು ಉಕ್ಕನ್ನು ಪೂರೈಸಿದೆ.

ಸೇತುವೆಯಲ್ಲಿ ಗಂಟೆಗೆ 100 ಕಿಮೀ ವೇಗದ ಸಂಚಾರಕ್ಕೆ ವಿನ್ಯಾಸಗೊಳಿಸಿದ್ದರೂ, ಆರಂಭದಲ್ಲಿ ಅಪಘಾತ ತಡೆಯಲು ಮತ್ತು ವಾಹನಚಾಲಕರು ಸೇತುವೆಗೆ ಹೊಂದಿಕೊಳ್ಳಲು 50 ಕಿಮೀ ವೇಗದ ಮಿತಿ ಅಳವಡಿಕೆಗೆ ಯೋಜಿಸಿದೆ.

ಇದನ್ನೂ ಓದಿ:
ದಿನಕ್ಕೆ ಸಾವಿರ ಕಿಲೋವ್ಯಾಟ್ಸ್ ವಿದ್ಯುತ್ ಬೇಕು ಈ ಸೇತುವೆಗೆ!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಫ್ಜಲ್ ಗಲ್ಲು ತೀರ್ಮಾನಕ್ಕೆ ಇನ್ನೂ 2 ವರ್ಷ: ಕಾಂಗ್ರೆಸ್
ಬಾಬ್ರಿ ಮಸೀದಿ ಧ್ವಂಸ; 17ವರ್ಷದ ನಂತ್ರ ವರದಿ ಸಲ್ಲಿಕೆ
ಬುರ್ಖಾ ನಿಷೇಧ ಒತ್ತಾಯ: ಇದೀಗ ಠಾಕ್ರೆ ಸರದಿ
ಹೈಕೋರ್ಟ್ ಜಡ್ಜ್ ಮೇಲೆ ತ.ನಾ. ಕೇಂದ್ರ ಸಚಿವರ ಒತ್ತಡ
ಜಲಿಯನ್‌ವಾಲಾ ಹತ್ಯಾಕಾಂಡದ ಕೊನೆಯ ಪ್ರತ್ಯಕ್ಷದರ್ಶಿ ಇನ್ನಿಲ್ಲ
ಏರ್ ಇಂಡಿಯಾ ತುರ್ತು ಭೂಸ್ಪರ್ಶ