ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಎಂಡಬ್ಲ್ಯು: ವಕೀಲ ಆನಂದ್ ಶಿಕ್ಷೆಯನ್ನು ಎತ್ತಿಹಿಡಿದ ಸು.ಕೋ (BMW | SC | RK Anand | conviction)
 
ಸುಪ್ರೀಂಕೋರ್ಟ್ ಬುಧವಾರ ನೀಡಿರುವ ಐತಿಹಾಸಿಕ ತೀರ್ಪೊಂದರಲ್ಲಿ, ಕುಖ್ಯಾತ ಬಿಎಂಡಬ್ಲ್ಯು ಪ್ರಕರಣದ ಸಾಕ್ಷಿಯೊಬ್ಬನ ಮೇಲೆ ಪ್ರಭಾವ ಬೀರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಆರ್.ಕೆ. ಆನಂದ್ ಅವರನ್ನು ದೋಷಿ ಎಂಬುದಾಗಿ ತೀರ್ಪು ನೀಡಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.

ನ್ಯಾಯಮೂರ್ತಿಗಳಾದ ಬಿ.ಎನ್. ಅಗರ್ವಾಲ್, ಜಿ.ಎಸ್. ಸಿಂಘ್ವಿ ಮತ್ತು ಅಫ್ತಾಬ್ ಆಲಂ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ವಿಶೇಷ ಸರ್ಕಾರಿ ಅಭಿಯೋಜಕ ಐ.ಯು. ಖಾನ್ ಅವರು ತಪ್ಪಿತಸ್ಥರೆಂದು ನೀಡಿರುವ ತೀರ್ಪನ್ನು ತಳ್ಳಿಹಾಕಿದೆ. ಅಲ್ಲದೆ ನ್ಯಾಯಾಲಯ ನಿಂದನೆ ಕುರಿತ ಅವರ ವಿರುದ್ಧ ಯಾವುದೇ ಆಧಾರಗಳಿಲ್ಲ ಎಂದು ಸರ್ವೋಚ್ಚನ್ಯಾಯಾಲಯ ಹೇಳಿದೆ.

ಈ ಕುರಿತು ಸುದ್ದಿವಾಹಿನಿಯೊಂದು ನಡೆಸಿರುವ ಕುಟುಕು ಕಾರ್ಯಾಚರಣೆಗೆ ವ್ಯಕ್ತವಾದ ಟೀಕೆಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ, ಸಾರ್ವಜನಿಕ ಹಿತಾಸಕ್ತಿಯಿಂದ ಮಾಧ್ಯಮವು ಈ ಕಾರ್ಯಾಚರಣೆ ನಡೆಸಿದೆ ಎಂದು ಅಭಿಪ್ರಾಯಿಸಿತು.

ಬಿಎಂಡಬ್ಲ್ಯು ಪ್ರಕರಣದ ಸಾಕ್ಷಿಯಾಗಿರುವ ಸುನಿಲ್ ಕುಲಕರ್ಣಿ ಮೇಲೆ ಪ್ರಭಾವ ಬೀರಿರುವ ಆಪಾದನೆಯ ಹಿನ್ನೆಲೆಯಲ್ಲಿ ಈ ಇಬ್ಬರು ವಕೀಲರನ್ನು ದೋಷಿಗಳೆಂದು ದೆಹಲಿ ಹೈಕೋರ್ಟ್ ಕಳೆದ ಆಗಸ್ಟ್ 21ರಂದು ತೀರ್ಪು ನೀಡಿತ್ತು. ಅಲ್ಲದೆ ಅವರ ಹಿರಿಯ ವಕೀಲರು ಎಂಬ ಪದನಾಮವನ್ನು ತೆಗೆದು ಹಾಕಿತ್ತು. ಮತ್ತು ನಾಲ್ಕು ತಿಂಗಳ ಕಾಲ ಭಾರತದ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳ ಕುರಿತು ವಾದಿಸಲು ಹಾಜರಾಗುವುದಕ್ಕೆ ನಿಷೇಧ ಹೇರಿತ್ತು.

ದೆಹಲಿ ಹೈಕೋರ್ಟು ಖಾಸಗಿ ವಾಹಿನಿಯ ಕುಟುಕು ಕಾರ್ಯಾಚರಣೆಯ ಆಧಾರದಲ್ಲಿ ಈ ತೀರ್ಪು ನೀಡಿತ್ತು. ಈ ಇಬ್ಬರೂ ವಕೀಲರೂ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದು, ಪದನಾಮವನ್ನು ತೆಗೆದು ಹಾಕುವಲ್ಲಿ ಹೈಕೋರ್ಟ್ ತನ್ನ ನ್ಯಾಯವ್ಯಾಪ್ತಿ ಮೀರಿದೆ ಎಂದು ಆಪಾದಿಸಿದ್ದರು. ಅಲ್ಲದೆ, ಭಾರತೀಯ ವಕೀಲರ ಸಂಘಕ್ಕೆ ಮಾತ್ರ ಈ ಅಧಿಕಾರವಿದೆ ಎಂದು ವಾದಿಸಿದ್ದರು. ಇದರೊಂದಿಗೆ ಖಾಸಗಿ ವಾಹಿನಿಯ ಕುಟುಕು ಕಾರ್ಯಾಚರಣೆಯ ಟೇಪ್‌ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದ್ದರು.

ಖಾಸಗಿ ವಾಹಿನಿಯು 2007ರ ಮೇ 30ರಂದು ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಆನಂದ್ ಹಾಗೂ ಖಾನ್ ಅವರು ಕಲುಕರ್ಣಿ ಮೇಲೆ ಪ್ರಭಾವ ಬೀರುವುದನ್ನು ತೋರಿಸಲಾಗಿತ್ತು.

ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಸುಪ್ರೀಂ ಕೋರ್ಟ್ ಇಬ್ಬರು ಅಮಿಕಸ್ ಕ್ಯೂರಿಗಳನ್ನು ನೇಮಿಸಿತ್ತು. ಪ್ರಸಕ್ತ ಸಾಲಿಸಿಟರ್ ಜನರಲ್ ಆಗಿರುವ ಗೋಪಾಲ ಸುಬ್ರಮಣ್ಯಂ ಹಾಗೂ ಹಿರಿಯ ನ್ಯಾಯವಾದಿ ಎಲ್. ನಾಗೇಶ್ವರ ರಾವ್ ಅವರುಗಳು ಅಮಿಕಸ್ ಕ್ಯೂರಿಗಳಾಗಿದ್ದರು. ನ್ಯಾಯವ್ಯವಸ್ಥೆಯಲ್ಲಿ ಜನತೆಯ ವಿಶ್ವಾಸವನ್ನು ಕಾಯ್ದುಕೊಳ್ಳಲು ಅಪರಾಧಿಕರಣಗೊಳ್ಳುವ ವ್ಯವಸ್ಥೆಯನ್ನು ಶುದ್ಧೀಕರಿಸುವ ಅವಶ್ಯಕತೆ ಇದೆ ಎಂದು ಈ ಇಬ್ಬರೂ ಅಭಿಪ್ರಾಯಿಸಿದ್ದರು.

ಯೂರು ಈ ಆನಂದ್?
1976ರಲ್ಲಿ ಇವರನ್ನು ಸರ್ಕಾರಿ ವಕೀಲರಾಗಿ ನೇಮಿಸಲಾಗಿತ್ತು. ಆದರೆ 1980ರಲ್ಲಿ ಇಂದಿರಾ ಗಾಂಧಿ ವಿರುದ್ಧ ಅವರ ಸೊಸೆ ಮನೇಕಾ ಗಾಂಧಿ (ಸಂಜಯ್ ಗಾಂಧಿ ಮರಣದ ಬಳಿಕ) ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹೂಡಿದ್ದ ಮೊಕದ್ದಮೆಯಲ್ಲಿ ಇಂದಿರಾ ಗಾಂಧಿಯವರನ್ನು ಪ್ರತಿನಿಧಿಸಿದ್ದ ವೇಳೆ ಆನಂದ್ ತಮ್ಮ ವೃತ್ತಿ ಜೀವನದಲ್ಲಿ ಬಹುದೊಡ್ಡ ತಿರುವು ಪಡೆದರು. 2000ರಲ್ಲಿ ಅವರನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿತ್ತು. 2004ರಲ್ಲಿ ಅವರು ಕಾಂಗ್ರೆಸ್ ಟಿಕೆಟ್‌ನಿಂದ ದಕ್ಷಿಣ ದೆಹಲಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು.

ಹೆಚ್ಚಿನ ಮಾಹಿತಿಗ ಬಿಎಂಡಬ್ಲ್ಯು ಬಯಲು ಪ್ರಕರಣ: ಹಿರಿಯ ವಕೀಲರಿಬ್ಬರು ತಪ್ಪಿತಸ್ಥರು ಓದಿ
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ