ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏಡ್ಸ್‌ಭಿತ್ತಿಪತ್ರದಲ್ಲಿ ಮಹಿಳೆ ಚಿತ್ರ ತೆರವಿಗೆ ಹೈ.ಕೋ ಆದೇಶ (Madras High Court | Health Ministry | AIDS)
 
ತಮಿಳ್ನಾಡಿನ ಏಡ್ಸ್ ಜಾಗೃತಿ ಆಂದೋಲನದ ಭಿತ್ತಿಚಿತ್ರದಲ್ಲಿ ಗೃಹಿಣಿಯೊಬ್ಬರ ಅನುಮತಿಯಿಲ್ಲದ ಪ್ರಕಟಿಸಲಾಗಿರುವ ಭಾವಚಿತ್ರವನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.

ತನ್ನ ಹಾಗೂ ತನ್ನಪುತ್ರನ ಚಿತ್ರವನ್ನು ಭಿತ್ತಿಚಿತ್ರದಲ್ಲಿ ಮುದ್ರಿಸಿರುವುದರಿಂದ ತನ್ನ ಬಂಧುಗಳು, ಕುಟುಂಬವರ್ಗ ಹಾಗೂ ನೆರೆಹೊರೆಯವರು ತನಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಮಹಿಳೆ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಗುಣಾ ಅವರನ್ನೊಳಗೊಂಡ ನ್ಯಾಪೀಠವು ಈ ಚಿತ್ರವನ್ನು ತೆರವುಗೊಳಿಸುವಂತೆ ತಮಿಳ್ನಾಡು ಏಡ್ಸ್ ಕಂಟ್ರೋಲ್ ಸೊಸೈಟಿಗೆ ಆದೇಶ ನೀಡಿದೆ. ಚಿತ್ರ ಪಕ್ರಟಣೆಯಿಂದುಂಟಾಗಿರುವ ಹಾನಿಗಾಗಿ ತನಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಹಾಗೂ ಸಾರ್ವಜನಿಕವಾಗಿ ಕ್ಷಣೆಯಾಚಿಸಬೇಕು ಎಂದು ನೊಂದ ಮಹಿಳೆಯ ನ್ಯಾಯಾಲಯವನ್ನು ಕೋರಿದ್ದರು.

ವಾರದೊಳಗೆ ಮಹಿಳೆಯ ಭಾವಚಿತ್ರವನ್ನು ತೆರವುಗೊಳಿಸುವಂತೆ ಆರೋಗ್ಯ ಸಚಿವಾಲಯಕ್ಕೆ ನ್ಯಾಯಾಲಯ ಆದೇಶ ನೀಡಿದೆ ಎಂದು ಮಹಿಳಾ ಪರ ವಕೀಲ ಜಿ. ಮೋಹನ್ ಕೃಷ್ಣನ್ ಹೇಳಿದ್ದಾರೆ.

ಇದೇ ವೇಳೆ ಬ್ಯಾನರ್ ಹಾಗೂ ಜಾಹೀರಾತುಗಳ ಫಲಕ ಪೂರೈಕೆ ಗುತ್ತಿಗೆಯನ್ನು ಶಶಿ ಏಜೆನ್ಸಿಗೆ 92 ಸಾವಿರ ರೂಗಳಿಗೆ ಗುತ್ತಿಗೆ ನೀಜಲಾಗಿತ್ತು. ಮಹಿಳೆ ಮತ್ತು ಮಗುವಿನ ಚಿತ್ರದ ಹಕ್ಕನ್ನು ವೆಬ್‌ಸೈಟ್ ಮಾಲಿಕರಿಂದ ಈ ಸಂಸ್ಥೆ ಪಡೆದುಕೊಂಡಿದೆ ಎಂದು ಏಡ್ಸ್ ಕಂಟ್ರೋಲ್ ಸೊಸೈಟಿ ಪರ ವಕೀಲ ಆರ್ ರತ್ನಾಕರ ಹೇಳಿದ್ದಾರೆ.

ಪೊಲೀಯೋ ಲಸಿಕೆ ಶಿಬಿರದಲ್ಲಿ ಚಿತ್ರೀಕರಿಸಲಾಗಿದ್ದ ತಾಯಿ-ಮಗುವಿನ ಚಿತ್ರವನ್ನು ದುರ್ಬಳಕೆ ಮಾಡಲಾಗಿದೆ ಎಂದು ವಾದಿ ಪರ ವಕೀಲರು ಆಪಾದಿಸಿದ್ದಾರೆ.

ಏಡ್ಸ್ ಭಿತ್ತಿಪತ್ರದಲ್ಲಿ ಮಹಿಳೆ ಚಿತ್ರ: ಕೋಟಿ ಪರಿಹಾರಕ್ಕೆ ಒತ್ತಾಯ
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ