ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏಡ್ಸ್ ಭಿತ್ತಿಪತ್ರದಲ್ಲಿ ಮಹಿಳೆ ಚಿತ್ರ: ಕೋಟಿ ಪರಿಹಾರಕ್ಕೆ ಒತ್ತಾಯ (Chennai | AIDS | Woman | High Court)
 
ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯು ಪ್ರಕಟಿಸಿರುವ ಏಡ್ಸ್ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳಲ್ಲಿ ತನ್ನ ಹಾಗೂ ತನ್ನ ಮಗುವಿನ ಚಿತ್ರಗಳನ್ನು ಅನುಮತಿ ಇಲ್ಲದೆ ಪ್ರಕಟಿಸಿರುವ ಕ್ರಮದ ವಿರುದ್ಧ ಆರೋಗ್ಯವಂತ ಗೃಹಿಣಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ ಇದರಿಂದ ತನಗುಂಟಾಗಿರುವ ಹಾನಿಗಾಗಿ ಒಂದು ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.

ಪ್ರಸ್ತುತ ಭಿತ್ತಿ ಪತ್ರಗಳನ್ನು ಎಲ್ಲೆಡೆ ಹಚ್ಚಿದ್ದು ಚಿತ್ರದಲ್ಲಿ ತನ್ನನ್ನು ಮತ್ತು ತನ್ನ ಪುತ್ರನನ್ನು ನೋಡಿರುವ ಬಂಧುಗಳು ಮತ್ತು ನೆರೆಹೊರೆಯವರು ತನ್ನನ್ನು ದೂರವಿರಿಸಿ ಅಘೋಷಿತ ಬಹಿಷ್ಕಾರ ಹಾಕಿದ್ದಾರೆ. ಇದಕ್ಕಾಗಿ ಸಂಸ್ಥೆಯು ತನಗೆ ಪರಿಹಾರ ನೀಡಬೇಕು ಎಂದು ಆರ್ಜಿಯಲ್ಲಿ ಒತ್ತಾಯಿಸಿದ್ದಾರೆ.

"ಕಷ್ಟಕರ ಪರಿಸ್ಥಿತಿಯಲ್ಲಿ ತಾನು ಹಾಗೂ ತನ್ನ ಪುತ್ರ ಧನ್ಯವಾದ ಹೇಳುತ್ತಿರುವಂತೆ ತೋರುವ ಚಿತ್ರವನ್ನು ಭಿತ್ತಿಚಿತ್ರದಲ್ಲಿ ಪ್ರಕಟಿಸಲಾಗಿದೆ. ತಾನು ಆರೋಗ್ಯವಂತಳಾಗಿದ್ದೇನೆ. ಆದರೆ ಈ ಚಿತ್ರಗಳು ತನ್ನನ್ನು ಏಡ್ಸ್ ರೋಗಿ ಎಂಬಂತೆ ಬಿಂಬಿಸುತ್ತವೆ" ಎಂದು ಅವರು ದೂರಿದ್ದಾರೆ.

"ಪತಿಯೂ ತನ್ನನ್ನು ಸಂಶಯದಿಂದ ನೋಡಿದ್ದರು ಹಾಗೂ ತನ್ನ ಮಗುವೂ ಸಮಾಜದಲ್ಲಿ ಪಕ್ಷಪಾತ ಎದುರಿಸಬೇಕಾಗಿದೆ. ಇವೆಲ್ಲವುಗಳಿಂದ ಮನನೊಂದ ತಾನು ಒಂದು ಹಂತದಲ್ಲಿ ಆತ್ಮಹತ್ಯೆಯ ಆಲೋಚನೆಯನ್ನೂ ಮಾಡಿದ್ದೆ " ಎಂದು ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.

ಈ ಭಿತ್ತಿಪತ್ರಗಳನ್ನು ಇನ್ನು ಮುಂದೆ ಅಂಟಿಸದಂತೆ ಮತ್ತು ಈಗಾಗಲೇ ಅಂಟಿಸಿರುವ ಭಿತ್ತಿಪತ್ರಗಳನ್ನು ತೆಗೆಸುವಂತೆಯೂ ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸುಗುಣಾ ಅವರು ಏಡ್ಸ್ ನಿಯಂತ್ರಣ ಸಂಸ್ಥೆಗೆ ನೋಟೀಸ್ ಜಾರಿಮಾಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ