ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತ.ನಾ: ಮೀನುಗಾರರ ದುಃಖ ದುಮ್ಮಾನ ಆಲಿಸಿದ ರಾಹುಲ್ ಗಾಂಧಿ (Rahul Gandhi | Fisherfolk | Tamil Nadu | Congress)
 
PTI
ತನ್ನ ಮೂರು ದಿನಗಳ ತಮಿಳ್ನಾಡು ಪ್ರವಾಸವನ್ನು ಆರಂಭಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಮಂಗಳವಾರ ಇಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮೀನುಗಾರರ ಕಷ್ಟಸುಖಗಳನ್ನು ಆಲಿಸಿದರು. ಅಲ್ಲದೆ ಮೀನುಗಾರರ ನೋವುಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ತಮಿಳ್ನಾಡಿನಲ್ಲಿ 1967ರಿಂದ ಅಧಿಕಾರ ಕಾಂಗ್ರೆಸ್‌ನಿಂದ ದೂರವೇ ಉಳಿದಿದೆ. ದ್ರಾವಿಡ ರಾಜಕೀಯದ ಎರಡು ಧ್ರುವಗಳಾಗಿರುವ ಡಿಎಂಕೆ ಅಥವಾ ಎಐಎಡಿಎಂಕೆಗಳೇ ಮುಖ್ಯಮಂತ್ರಿ ಗಾದಿ ಏರುತ್ತಿದ್ದು, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡಲು ಮುಂದಾಗಿರುವಂತೆ ತೋರುತ್ತದೆ.

ರಾಹುಲ್ ಗಾಂಧಿ ಇಲ್ಲಿಗೆ ಆಗಮಿಸುತ್ತಲೇ ಮೀನುಗಾರ ಸಮುದಾಯದೊಂಡಿದೆ ಸುಮಾರು ಒಂದೂವರೆ ಗಂಟೆಗಳ ಕಾಲ ಮುಚ್ಚಿದ ಬಾಗಿಲ ಮಾತುಕತೆ ನಡೆಸಿದರು.

"ಒಬ್ಬ ಪ್ರಮುಖ ವ್ಯಕ್ತಿಯೊಬ್ಬ ಆಗಮಿಸಿ ತಮ್ಮ ನೋವುಗಳನ್ನು ಆಲಿಸುತ್ತಿರುವುದು ಇದೇ ಪ್ರಥಮವಾಗಿದ್ದು, ಇದೊಂದು ಮಹಾನ್ ಅನುಭವ" ಎಂಬುದಾಗಿ 35 ಹರೆಯದ ಮೇರಿ ಹೇಳುತ್ತಾರೆ. ಸಭೆಯಲ್ಲಿ ಸುಮಾರು 1,500 ಮೀನುಗಾರರು ಭಾಗವಹಿಸಿದ್ದು ಇದರಲ್ಲಿ 200 ಮಂದಿ ಮಹಿಳೆಯರು.

ತೆರಿಗೆ ವಿನಾಯಿತಿಯಿಂದ ಹಿಡಿದು ಕೇಂದ್ರದಲ್ಲಿ ಮೀನುಗಾರಿಕೆಗೆ ಪ್ರತ್ಯೇಖ ಸಚಿವಾಲಯಗಳನ್ನು ಹೊಂದುವ ತನಕ ವಿವಿಧ ವಿಚಾರಗಳು ಸಭೆಯಲ್ಲಿ ಚರ್ಚಿತಗೊಂಡವು ಎಂಬುದಾಗಿ ಸಭೆಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ.

ಪ್ರತ್ಯೇಕ ಮಂತ್ರಿಮಂಡಲವನ್ನು ಹೊಂದುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿದೇ ಎಂದು ನಿಮಗನಿಸುತ್ತದೆಯೇ ಎಂದು ಪ್ರಶ್ನಿಸಿದ ರಾಹುಲ್, ಈ ಸಲಹೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ನುಡಿದರು.

ಕೆಲವು ಮೀನುಗಾರರು ಸಾಲಮನ್ನಾದ ವಿನಂತಿ ಮುಂದಿಟ್ಟರೆ, ಮತ್ತೆ ಕೆಲವರು ಮೀನುಗಾರಿಕಾ ಬೋಟ್‌ಗಳಿಗೆ ಬಳಸುವ ಡೀಸೆಲ್‌ಗೆ ಸಹಾಯಧನ ಕೇಳಿದರು. ಇದೇ ವೇಳೆ ಔಟ್‌ಬೋರ್ಡ್ ಎಂಜಿನ್‌ಗಳು ಮತ್ತು ಮೀನುಗಾರಿಕಾ ಪರಿಕರಗಳಿಗೆ ತೆರಿಗೆ ವಿನಾಯಿತಿ ಯಾಚಿಸಿದರು.

ರಾಹುಲ್ ಅವರು ಸಭಿಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ್ದು ಅವರ ಪ್ರಶ್ನೆಗಳಿಗೆ ಭಾಗವಹಿಸಿದ್ದರೂ ಸಹ ಅಷ್ಟೆ ಮುಕ್ತವಾಗಿ ಉತ್ತರಿಸಿದರು. ಒಟ್ಟಾರೆ ಕಾರ್ಯಕ್ರಮ ಲವಲವಿಕೆಯಿಂದ ತುಂಬಿತ್ತು ಎಂಬುದಾಗಿ ರಾಹುಲ್ ಜತೆಗಿದ್ದ ಕೇರಳದ ಶಾಸಕ ಪಿ.ಸಿ. ವಿಶುನಾಥ್ ನುಡಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ