ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಕನಿಂದ ಸೆಕ್ಸ್ ಪಾಠ (Teacher | classroom | mobile | Sex clips)
 
ಶಾಲೆಯೇ ದೇವಾಲಯ, ಗುರುವೇ ದೇವರು ಎನ್ನುವ ಕಾಲವೊಂದಿತ್ತು. ಅದನ್ನು ಮಕ್ಕಳು ಒಪ್ಪಿಕೊಂಡರೂ ಶಿಕ್ಷಕರೇಕೋ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದೆನಿಸುತ್ತಿದೆ. ಅದಕ್ಕೀಗ ಸಿಕ್ಕಿರುವ ಮತ್ತೊಂದು ಉದಾಹರಣೆಯಿದು.

ಮಕ್ಕಳಿಗೆ ಪಠ್ಯ ಪುಸ್ತಕದೊಂದಿಗೆ ಜೀವನ ಪಾಠವನ್ನು ಹೇಳಿಕೊಡಬೇಕಾದ ಶಿಕ್ಷಕನೊಬ್ಬ ಮಾಡಿದ್ದೇ ಬೇರೆ. ಉತ್ತರ ಪ್ರದೇಶದ ಪ್ರಾಥಮಿಕ ಶಾಲೆಯೊಂದರ ಮಾಸ್ತರನೊಬ್ಬ ತನ್ನ ಮೊಬೈಲ್‌ನಲ್ಲಿದ್ದ 'ಅಶ್ಲೀಲ' ಚಿತ್ರಗಳನ್ನು ತರಗತಿಯಲ್ಲೇ ನೋಡಿದ್ದಲ್ಲದೆ ಮಕ್ಕಳಿಗೂ ತೋರಿಸುವ ಮೂಲಕ 'ಘನಂಧಾರಿ' ಕೃತ್ಯವೆಸಗಿದ್ದಾನೆ.

ಬುಲಂದಶಾರ್ ಎಂಬ ಜಿಲ್ಲೆಯ ಗುಲಾವತಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಮಹಾನುಭಾವನ ಹೆಸರು ಶಿವ ಕುಮಾರ್. ಮೊಬೈಲ್‌ನಲ್ಲಿದ್ದ ಅಶ್ಲೀಲ ವೀಡಿಯೋ ಮತ್ತು ಫೋಟೋಗಳನ್ನು ಮಕ್ಕಳಿಗೆ ತೋರಿಸಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ.

ವಿದ್ಯಾರ್ಥಿಗಳು ಈತನ 'ಲೀಲೆ'ಗಳನ್ನು ಹೆತ್ತವರಲ್ಲಿ ವಿವರಿಸಿದ ನಂತರ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆಂದು ಇಲ್ಲಿನ ಜಿಲ್ಲಾ ಪ್ರಾಥಮಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥ ರಮೇಶ್ ಚಂದ್ರ ವರ್ಮಾ ತಿಳಿಸಿದ್ದಾರೆ.

ಶಿವ ಕುಮಾರ್ ವಿರುದ್ಧ ಮಾಡಿರುವ ಆರೋಪಗಳು ಗಂಭೀರವಾಗಿವೆ. ಹಾಗಾಗಿ ಇದರ ವಿರುದ್ಧ ನಾವು ತನಿಖೆ ನಡೆಸಲು ನಿರ್ಧರಿಸಿದ್ದೇವೆ. ತನಿಖೆ ಸಂಪೂರ್ಣವಾಗುವವರೆಗೆ ತರಗತಿಗಳಿಗೆ ಹಾಜರಾಗದಂತೆ, ಪಾಠ ಮಾಡದಂತೆ ಅವರಿಗೆ ಸೂಚಿಸಲಾಗಿದೆ ಎಂದು ವರ್ಮಾ ತಿಳಿಸಿದ್ದಾರೆ.

ತಾನು ತೋರಿಸಿದ ಅಶ್ಲೀಲ ಚಿತ್ರಗಳ ಬಗ್ಗೆ ಶಾಲೆಯ ಫ್ರಿನ್ಸಿಪಾಲ್ ಅಥವಾ ಬೇರೆ ಯಾರಲ್ಲಾದರೂ ಬಾಯಿ ಬಿಟ್ಟರೆ ನಿಮಗೆ ಗ್ರಹಚಾರ ಕಾದಿದೆ ಎಂದು ಮಕ್ಕಳಿಗೆ ಶಿಕ್ಷಕ ಬೆದರಿಕೆ ಕೂಡ ಹಾಕಿದ್ದ ಎಂದು ಹೆತ್ತವರು ತಮ್ಮ ದೂರಿನಲ್ಲಿ ನಮೂದಿಸಿದ್ದಾರೆಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ