ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ ಮೆಹಂದರ್ ಸೆಕ್ಟರ್‌ನಲ್ಲಿ ಉಗ್ರಗಾಮಿಗಳ ಅಕ್ರಮ ನುಸುಳುವಿಕೆ ಸಂಚನ್ನು ವಿಫಲಗೊಳಿಸಿರುವ ಭದ್ರತಾ ಪಡೆಗಳು ಮೂವರು ಉಗ್ರರನ್ನು ಗುಂಡಿಕ್ಕಿ ಕೊಂಡಿದ್ದಾರೆ. ಇದೇ ವೇಳೆ ಮೇಜರ್ ರ‌್ಯಾಂಕಿನ ಅಧಿಕಾರಿಯೊಬ್ಬರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಮೆಹಂದರ್ ಸೆಕ್ಟರ್‌ನ ಸೋನಾಗಾಲಿ ಪ್ರದೇಶದ ಗಡಿನಿಯಂತ್ರಣ ರೇಖೆಯಲ್ಲಿ ಉಗ್ರರ ಚಲನವಲನಗಳನ್ನು ಕಂಡ ಭದ್ರತಾ ಪಡೆಗಳು ಅವರನ್ನು ಕಳೆದ ರಾತ್ರಿ ಗುಂಡಿಕ್ಕಿ ಉರುಳಿಸಿದ್ದಾರೆ.
ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದು ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಇಬ್ಬರು ಉಗ್ರರು ಸಾವನ್ನಪ್ಪಿದರು. ಇದೇವೇಳೆ ಮೇಜರ್ ಆಕಾಶ್ ಸಿಂಗ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರು ಸಾವನ್ನಪ್ಪಿದರು.
ಇನ್ನೊಬ್ಬ ಉಗ್ರ ಬುಧವಾರ ಮುಂಜಾನೆ ಸಾವನ್ನಪ್ಪಿದ್ದಾನೆ. ಉಗ್ರರ ಬಳಿಯಿಂದ ಶಸ್ತ್ರಾಸ್ತ್ರಗಳು ಮತ್ತು ವೈರ್‌ಲೆಸ್ ಸೆಟ್ಟನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯ ಇನ್ನೂ ಮುಂದುವರಿದೆ.