ಸಿನಿಮಾ ನಿರ್ದೇಶಕರಿಂದ ಹಿಡಿದು ಜನಸಾಮಾನ್ಯರ ತನಕ 09.09.09 ಶುಭದಿನವಾಗಿ ಗೋಚರಿಸಿದೆ. ಈ ದಿನದಂದು 9 ಶೀರ್ಷಿಕೆಯ ಸಿನಿಮಾಗಳ ಬಿಡುಗಡೆ ಮಾತ್ರವಲ್ಲದೆ, ಅಪರೂಪದ ಸಂಖ್ಯಾ ಸಂಯೋಗದ ಈ ದಿನದಂದು ಶುಭಕಾರ್ಯಕ್ಕಾಗಿ ಜನಸಾಮಾನ್ಯರು ಇಚ್ಚಿಸಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವ ಹೆತ್ತವರು ಇದೇದಿನದಂದು ಸಿಸೇರಿಯನ್ ಮೂಲಕ ಹೆರಿಗೆಗಾಗಿ ವೈದ್ಯರನ್ನು ವಿನಂತಿಸಿದ್ದಾರೆ.
09.09.09 ಮಾತ್ರವಲ್ಲ. ಪ್ರತೀವರ್ಷವೂ ಇಂತಹುದೇ ಅಪೂರ್ವ ದಿನದಂದು ಮಕ್ಕಳು ಹುಟ್ಟಬೇಕು ಎಂಬುದಾಗಿ ಹೆತ್ತವರು ಬಯಸುತ್ತಾರೆ. ಉದಾಹರಣೆಗೆ 08.08.08 ಅಥವಾ 07.07.07 ಇಂತಹ ದಿನಗಳು ಸಂಶ್ಯಾಶಾಸ್ತ್ರ ಪ್ರಕಾರ ಅಪೂರ್ವವಾದದ್ದು ಎಂಬುದು ಜನಸಾಮಾನ್ಯರ ನಂಬುಗೆ.
ಬುಧವಾರದಂದು ಹುಟ್ಟಿದ ಮಕ್ಕಳಿಗೆ ವಿಶೇಷ ಯೋಗವಿರುತ್ತದೆ. ಅವರು ಬುದ್ಧಿವಂತಿಕೆಯೊಂದಿಗೆ ಅತ್ಯದ್ಭುತವಾದ ದೈಹಿಕ ಶಕ್ತಿಯನ್ನೂ ಹೊಂದಿರುತ್ತಾರೆ. ಅವರು ಭಾವನಾತ್ಮಕವಾಗಿ ಸಮತೋಲನವುಳ್ಳವರಾಗಿರುತ್ತಾರೆ ಮತ್ತು ಸೃಜನಶೀಲರಾಗಿರುತ್ತಾರೆ ಎಂಬುದಾಗಿ ಜ್ಯೋತಿಷಿ ಸುನಿಲ್ ಎಂಬವರು ಹೇಳುತ್ತಾರೆ.
9 ಸಂಖ್ಯೆಯು ಅಂತ್ಯಂತ ಶ್ರೇಷ್ಠ ಎಂಬುದು ಜನರ ನಂಬುಗೆ. ಒಂಬತ್ತು ಸರ್ವೋಚ್ಚ ಅಂಕವಾಗಿದ್ದು ಅದರ ಬಳಿಕ ಅಂಕೆಗಳಿಲ್ಲದ ಕಾರಣ ಅತ್ಯುತ್ತಮವಂತೆ.
ಒಂಬತ್ತನ್ನು ಹೇಗೇ ಕೂಡಿದರೂ, ಗುಣಿಸಿದರೂ ಕಟ್ಟಕಡೆಯದಾಗಿ ಸಿಗುವ ಸಂಖ್ಯೆಯೂ ಸಹ ಒಂಬತ್ತೇ ಆಗಿರುತ್ತದೆ ಉದಾಹರಣೆಗೆ 9x9=81. ಅಂದರೆ 8+1=9. 9+9=18. 1+8=9. ಇದು ಮಂಗಳನ ಸಂಖ್ಯೆಯಾಗಿದ್ದು, ಶಕ್ತಿ, ಚೈತನ್ಯ, ಹಾಗೂ ಸೃಜನಶೀಲತೆಯ ಸಂಕೇತವಾಗಿದೆ. ಈ ಸಂಖ್ಯೆಯ ಜನರು ಅತ್ಯಂತ ಉತ್ಸಾಹಿಗಳು ಹಾಗು ತೇಜಸ್ಸನ್ನು ಹೊಂದಿರುವವರಾಗಿರುತ್ತಾರೆ.