ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯದ ಬೇಡಿಕೆಗೆ ನಕಾರ ಸೂಚಿಸಿರುವ ಪ್ರಧಾನಮಂತ್ರಿ ಕಚೇರಿ ಇದಕ್ಕೆ ಕೃಷಿ ಸಚಿವಾಲಯದಿಂದ ಪ್ರತ್ಯೇಕ ಸಚಿವಾಲಯದ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ಕೇರಳದ ಆಲಪುರ ಕರಾವಳಿ ಕ್ಷೇತ್ರದ ಸಂಸದ(ಕಾಂಗ್ರೆಸ್)ರಾಗಿರುವ ಕೆ.ಸಿ. ವೇಣುಗೋಪಾಲ್ ಅವಕು ಪ್ರತ್ಯೇಕ ಸಚಿವಾಲಯದ ಬೇಡಿಕೆ ಇರಿಸಿದ್ದರು.
ಕಳೆದವಾರ ಪ್ರಧಾನಿ ಕಚೇರಿಯ ರಾಜ್ಯ ಸಚಿವ ಪೃಥ್ವಿರಾಜ ಚೌವಾಣ್ ಅವರು ಕಳೆದವಾರ ವೇಣುಗೋಪಾಲ್ ಅವರಿಗೆ ಪತ್ರಬರೆದಿದ್ದು, ಈ ವಿಚಾರದ ಕುರಿತು ಪ್ರಧಾನ ಮಂತ್ರಿ ಕಚೇರಿ ಪರೀಕ್ಷೆ ನಡೆಸಿದ್ದು, ರಾಷ್ಟ್ರದಲ್ಲಿ ವಿಶಾಲ ವ್ಯಾಪ್ತಿಯ ಸಂಪನ್ಮೂಲಗಳಿದ್ದು, 14 ದಶಲಕ್ಷಕ್ಕೂ ಅಧಿಕ ಮಂದಿ ತಮ್ಮ ಜೀವನಕ್ಕಾಗಿ ಮೀನುಗಾರಿಕೆಯನ್ನೇ ನೆಚ್ಚಿದ್ದಾರೆ ಎಂಬುದನ್ನು ಒಪ್ಪುತ್ತದೆ ಎಂದು ಹೇಳಿದ್ದಾರೆ.
ಕೃಷಿ ಸಚಿವಾಲಯದಲ್ಲಿ ಪಶುಸಂಗೋಪನೆ ಮತ್ತು ಹೈನು ಹಾಗೂ ಮೀನುಗಾರಿಕೆ ಇಲಾಖೆಗಳು ಸಂಪೂರ್ಣ ಸ್ವತಂತ್ರವಾಗಿದ್ದು, ಇದಕ್ಕೆ ಪ್ರತ್ಯೇಕ ಸಚಿವಾಲಯದ ಅವಶ್ಯಕತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ.