ಹಂದಿಜ್ವರವೆಂಬ ಮಹಾಮಾರಿಗೆ ಮೊದಲ ಬಲಿ ಪಡೆದ ಪುಣೆಯಲ್ಲಿ ಇದೀಗ ಮತ್ತೆ ಮೂರು ಸಾವು ಸಂಭವಿಸಿದ್ದು ಈ ರೋಗಕ್ಕೆ ಇಲ್ಲಿ ತುತ್ತಾದವರ ಒಟ್ಟು ಸಂಖ್ಯೆ 40ಕ್ಕೇರಿದೆ ಎಂಬುದಾಗಿ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪ್ರಕಾಶ್ ಚೌವಾಣ್(48) ಹಾಗೂ ಸೀಮಾ ಶಿರ್ಸತ್ ಎಂಬ ಮೂರರ ಹರೆಯದ ಬಾಲೆ ಮತ್ತು ಅಮರ್ ಕಾಲ್ಕೋಲ್ಕರ್ ಎಂಬ 17ರ ಹರೆಯದ ಯುವಕ ಕಳೆದ ರಾತ್ರಿ ವಿವಿಧ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ, ಇಲ್ಲಿಗೆ ಸಮೀಪದ ಲೋನಾವಾಲದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಡಾನ್‌ಬಾಸ್ಕೋ ಶಾಲೆಯ ವಿದ್ಯಾರ್ಥಿನಿಯೊಬ್ಬಳಲ್ಲಿ ಸೋಂಕು ಪತ್ತೆಯಾಗಿದೆ. ಮತ್ತು ಇತರ 11 ಮಕ್ಕಳಲ್ಲಿ ಈ ರೋಗದ ಲಕ್ಷಣ ಕಂಡಿರುವ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಸಾರಲಾಗಿದೆ.