ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೋಪಿಯಾನ್: ನಾಲ್ವರು ಪೊಲೀಸರಿಗೆ ಹೈಕೋ ಜಾಮೀನು (Shopian case | J&K | HC | bail | cops)
 
ವಿವಾದಾಸ್ಪದ ಶೋಪಿಯಾನ್ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತರಾಗಿರುವ ನಾಲ್ವರು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಜಮ್ಮು ಕಾಶ್ಮೀರ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದ್ದು, ಇದರಿಂದಾಗಿ ಜಮ್ಮು ಕಾಶ್ಮೀರದ ಒಮರ್ ಅಬ್ದುಲ್ಲಾ ಸರ್ಕಾರಕ್ಕೆ ಅತಿದೊಡ್ಡ ಹಿನ್ನಡೆಯುಂಟಾಗಿದೆ.

ಶೋಪಿಯಾನ್‌ನ ಮಾಜಿ ಎಸ್ಪಿ ಜಾವೇದ್ ಇಕ್ಬಾಲ್ ಮಟ್ಟೂ, ಡಿಎಸ್ಪಿ ರೋಹಿತ್ ಬಾಸ್ಕೋಟ, ಶೋಪಿಯಾನ್ ಎಸ್ಎಚ್ಒ ಶಫಿಕ್ ಅಹ್ಮದ್ ಮತ್ತು ಎಸ್ಐ ಗಾಜಿ ಅಬ್ದುಲ್ ರೆಹ್ಮಾನ್ ಅವರುಗಳನ್ನು ತಲಾ 50 ಸಾವಿರ ರೂಪಾಯಿ ಮುಚ್ಚಳಿಕೆಯ ಆಧಾರದಲ್ಲಿ ಜಾಮೀನು ನೀಡಿದೆ.

ಕಾಶ್ಮೀರದಲ್ಲಿ ಹಲವಾರು ಪ್ರತಿಭಟನೆ ಹಾಗೂ ಬಂದ್‌ಗಳಿಗೆ ಕಾರಣವಾಗಿರುವ ಈ ಶೋಪಿಯಾನ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪು ಎದುರಿಸುತ್ತಿರುವ ಈ ಅಧಿಕಾರಿಗಳ ಮೇಲೆ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಯನ್ನು ತಿರುಚಿರುವ ಆರೋಪವೂ ಇದೆ.

ಈ ಪ್ರಕರಣವನ್ನು ಸಿಬಿಐಗೊಪ್ಪಿಸಲು ಕಳೆದ ತಿಂಗಳು ಜಮ್ಮುಕಾಶ್ಮೀರ ಸರ್ಕಾರ ನಿರ್ಧರಿಸಿತ್ತು. ಆ ಪ್ರಕರಣದ ಡಿಎನ್ಎ ವರದಿಯನ್ನು ತಿರುಚಲಾಗಿದೆ ಎಂಬುದಾಗಿ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಗಂಟೆಗಳ ಬಳಿಕ ಪ್ರಕರಣವನ್ನು ಸಿಬಿಐಗೊಪ್ಪಿಸಲು ಜಮ್ಮು ಕಾಶ್ಮೀರ ಸಂಪುಟವು ಅವಿರೋಧ ನಿರ್ಧಾರ ಕೈಗೊಂಡಿತ್ತು.

ಈ ಹಿಂದಿನ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿತ್ತು. ಇದೀಗ ಹೆಚ್ಚೂಕಮ್ಮಿ ಒಂದು ತಿಂಗಳ ಬಳಿಕ ಶುಕ್ರವಾರ ಆರೋಪಿ ಪೊಲೀಸಧಿಕಾರಿಗಳಿಗೆ ಜಾಮೀನು ಲಭಿಸಿದೆ. ಮೊದಲ ಬಾರಿಗೆ ಅರ್ಜಿಸಲ್ಲಿಸಿದ್ದಾಗ ಸಿಆರ್‌ಪಿಸಿಯ ಸೆಕ್ಷನ್ 497ರ (ಜಾಮೀನು ನೀಡುವ ಅಥವಾ ನಿರಾಕರಿಸುವ ನ್ಯಾಯಾಧೀಶರ ವಿವೇಚನಾ ಅಧಿಕಾರ) ಅಡಿಯಲ್ಲಿ ಜಾಮೀನು ನಿರಾಕರಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ