ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳ್ನಾಡಿನಲ್ಲಿ ಬೃಂದಾಕಾರಟ್ ಬಂಧನ
 
ಮೆರವಣಿಗೆಯೊಂದನ್ನು ನಡೆಸುತ್ತಿದ್ದ ವೇಳೆ ಸಿಪಿಐ(ಎಂ) ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಅವರನ್ನು ಶನಿವಾರ ಬಂಧಿಸಲಾಗಿದೆ. ಕಳೆದವರ್ಷ ಮೇಲ್ಜಾತಿಯ ಹಿಂದುಗಳು ಮತ್ತು ದಲಿತರ ನಡುವೆ ನಡೆದ ಘರ್ಷಣೆಯಿಂದ ಜರ್ಜರಿತವಾದ ಹಳ್ಳಿಯತ್ತ ಅವರು ಅಖಿಲ ಭಾರತೀಯ ಪ್ರಜಾಪ್ರಭುತ್ವ ಮಹಿಳಾ ಸಂಘಟನೆಯ(ಎಐಡಿಡಬ್ಲ್ಯುಎ) ಕಾರ್ಯಕರ್ತರೊಂದಿಗೆ ಮೆರವಣಿಗೆ ತೆರಳುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿತ್ತು.

ಕಾರಟ್ ಅವರೊಂದಿಗೆ ಎಐಡಿಡಬ್ಲ್ಯುಎ ಪ್ರಧಾನ ಕಾರ್ಯದರ್ಶಿ ವಾಸುಕಿ, ಖಜಾಂಚಿ ಝಾನ್ಸಿ ರಾಣಿ, ರಾಜ್ಯ ಕಾರ್ಯದರ್ಶಿ ತಿರುಮಲ್ಲಿ ರಾಣಿ ಮತ್ತು ಇತರ ಆರು ಮಂದಿಯನ್ನು ತಿರುಲಪರಂಕುಡ್ರಂ ಪೊಲೀಸರು ಬಂಧಿಸಿದ್ದು ಅವರು ಉತಾವೊಪುರಂ ಹಳ್ಳಿಗೆ ಪ್ರವೇಶಿಸದಂತೆ ತಡೆದಿದ್ದಾರೆ. ಸ್ಥಳೀಯ ದೇವಾಲಯ ಒಂದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸಂಭವಿಸಿದ ಗಲಭೆಯ ವೇಳೆ ಪೊಲೀಸರು ಗುಂಡು ಹಾರಾಟ ನಡೆಸಿದ್ದು ಈ ಸಂದರ್ಭದ ದಲಿತನೊಬ್ಬ ಸಾವನ್ನಪ್ಪಿದ್ದ.

ಬೃಂದಾ ಹಾಗೂ ಇತರರ ಬಂಧನಕ್ಕೆ ಪೊಲೀಸರು ತಕ್ಷಣಕ್ಕೆ ಯಾವುದೇ ಕಾರಣ ನೀಡಿಲ್ಲ. ತಾನು ಗ್ರಾಮಕ್ಕೆ ಭೇಟಿ ನೀಡುವ ಮೂಲಕ ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಿಲ್ಲ. ಅಲ್ಲಿನ ಖಾಸಗಿ ಸಮಾರಂಭದಲ್ಲಿ ಭಾಗವಹಿಸಲು ತಾನು ತೆರಳುತ್ತಿದ್ದುದಾಗಿ ಅವರು ಹೇಳಿದ್ದಾರೆ. ರಸ್ತೆ ಮಧ್ಯದಲ್ಲಿ ತನ್ನ ಕಾರನ್ನು ಯಾವುದೇ ಕಾರಣ ನೀಡದೆ ಅಡ್ಡಗಟ್ಟಲಾಯಿತು ಎಂದು ಅವರು ದೂರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ