ಪಂಚಕುಲ(ಹರ್ಯಾಣ): ಪಂಚಕುಲ ಜಿಲ್ಲೆಯ ಗುಜುರಿ ಅಂಗಡಿಯೊಂದರಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಇಬ್ಬರು ಮಕ್ಕಳು ಭಾನುವಾರ ಸಾವನ್ನಪ್ಪಿದ್ದಾರೆ.
ಬಾಂಬ್ ಒಂದರಿಂದ ತಾಮ್ರವನ್ನು ಹೊರತೆಗೆಯಲು ಮಕ್ಕಳು ಪ್ರಯತ್ನಿಸುತ್ತಿದ್ದ ವೇಳೆ ಹಳೆಸಾಮಾನುಗಳ ಖರೀದಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂಬುದಾಗಿ ಪಂಚಕುಲ ಎಸ್ಪಿ ಅಮಿತಾಬ್ ದಿಲ್ಲಾನ್ ಹೇಳಿದ್ದಾರೆ.
ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇತರ ಮೂವರು ಗಂಭೀರ ಗಾಯಗೊಂಡಿದ್ದು ಇವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.