ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಪ್ಪುಹಣದ ಅಂಕಿಅಂಶವಿಲ್ಲ: ಸ್ವಿಸ್ ಬ್ಯಾಂಕ್ (Swiss bank | Switzerland | Black money | Statistics)
 
ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಕಪ್ಪುಹಣ ಕೊಳೆಯುತ್ತಿದ್ದು ಸಾವಿರಾರು ಕೋಟಿ ರೂಪಾಯಿ ಮೊತ್ತದ ಆ ದುಡ್ಡೇನಾದರೂ ದೇಶಕ್ಕೆ ಮರಳಿ ಬಂದರೆ, ದೇಶವನ್ನೇ ಉದ್ಧಾರ ಮಾಡಬಹುದು ಎಂಬುದಾಗಿ ನಮ್ಮ ರಾಜಕೀಯ ನಾಯಕರು ಹೇಳುಕೊಳ್ಳುತ್ತಿರುವುದರ ಮಧ್ಯದಲ್ಲೇ, ನಮ್ಮ ಬ್ಯಾಂಕುಗಳಲ್ಲಿ ಕಪ್ಪುಹಣಗಳ ಯಾವುದೇ ಅಂಕಿಅಂಶಗಳು ಇಲ್ಲವೇ ಇಲ್ಲ ಎಂದು ಸ್ವಿಸ್ ಬ್ಯಾಂಕುಗಳು ಹೇಳಿವೆ.

ಭಾರತೀಯರ 50 ಲಕ್ಷ ಕೋಟಿ ರೂಪಾಯಿಗಳಷ್ಟು ಕಪ್ಪು ಹಣ ಸ್ವಿಸ್ ಬ್ಯಾಂಕುಗಳಲ್ಲಿ ಸಂಗ್ರಹವಾಗಿದ್ದು ಸ್ವಿಸ್ ಬ್ಯಾಂಕುಗಳಲ್ಲಿ ಠೇವಣಿ ಹೊಂದಿರುವವರಲ್ಲಿ ಭಾರತೀಯರೇ ನಂ ವನ್ ಎಂಬುದಾಗಿ ಜಾಗತಿಕ ಸಂಸ್ಥೆಗಳು ಆಗೀಗ ಉಲ್ಲೇಖಿಸುತ್ತಿದ್ದವು. ಇದಲ್ಲದೆ, ಸ್ವಿಜರ್‌ಲ್ಯಾಂಡಿನ ಕೇಂದ್ರೀಯ ಬ್ಯಾಂಕ್ ಆಗಿರುವ ಸ್ವಿಸ್ ನ್ಯಾಶನಲ್ ಬ್ಯಾಂಕು ಸಹ ಹೇಳಿತ್ತು.

ಆದರೆ ಇದೆಲ್ಲ ಬರೀ ಬೊಗಳೆ ಎಂದಿರುವ ಸ್ವಿಸ್ ಬ್ಯಾಂಕುಗಳ ಸಂಘದ ಅಂತಾರಾಷ್ಟ್ರೀಯ ಸಂವಹನ ಅಧ್ಯಕ್ಷ ಜೇಮ್ಸ್ ನ್ಯಾಸನ್ ಹೇಳಿದ್ದಾರೆ.

ಇಂತಹ ಅಂಕಿ ಸಂಖ್ಯೆಗಳನ್ನು ಹೇಳುವವರು ಮೂಲಗಳನ್ನು ಬಹಿರಂಗ ಪಡಿಸಲಿ ಮತ್ತು ಈ ಅಂಕಿಸಂಖ್ಯೆಗಳನ್ನು ತಯಾರಿಸಲು ಬಳಸಿರುವ ವಿಧಾನಗಳನ್ನು ತಿಳಿಸಲಿ ಎಂಬುದಾಗಿಯೂ ಅವರು ಹೇಳಿದ್ದಾರೆ. ಕಪ್ಪುಹಣದ ಕುರಿತು ಯಾವುದೇ ಅಂಕಿಸಂಖ್ಯೆ ಇಲ್ಲವೇ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ