2010ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಈ ಹಿಂದೆ ಭರವಸೆ ನೀಡಿರುವಂತೆ ಮೂಲಸೌಕರ್ಯಗಳು ಸಂಪೂರ್ಣ ಸಿದ್ಧವಾಗಲಿದೆ ಎಂಬುದಾಗಿ ಇಂಡಿಯನ್ ಒಲಂಪಿಕ್ ಅಸೋಸಿಯೇಶನ್ ಮುಖ್ಯಸ್ಥ ಸುರೇಶ್ ಕಲ್ಮಾಡಿ ಸೋಮವಾರ ಹೇಳಿದ್ದಾರೆ.
ಎಲ್ಲವೂ ನಿಯಂತ್ರಣದಲ್ಲಿದ್ದು 2010ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಲ್ಮಾಡಿ ಹೇಳಿದ್ದಾರೆ. ನಿರ್ಮಾಣ ಕಾಮಗಾರಿಗಳು ಶೀಘ್ರಹಾಗೂ ದಕ್ಷತೆಯಿಂದ ನಡೆಯಲಿವೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಹೆಚ್ಚಿನ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ತಾನು ಪ್ರಧಾನಿಯವರ ಬಳಿಗೆ ಕಾಮನ್ವೆಲ್ತ್ ಕ್ರೀಡಾ ಪ್ರತಿಷ್ಠಾನದ ಅಧ್ಯಕ್ಷ ಮೈಖೆಲ್ ಫೆನ್ನೆಲ್ ಅವರನ್ನು ಕರೆದೊಯ್ಯಲು ಸಂತೋಷವಾಗಿದ್ದು ಯಾವುದೇ ವಿಚಾರದ ಕುರಿತು ಚರ್ಚಿಸಲು ಸಿದ್ಧವಿರುವುದಾಗಿಯೂ ತಿಳಿಸಿದರು. ಅವರ ಮನಸ್ಸಿನಲ್ಲಿ ಯಾವುದೇ ಸಂಶಯವಿರಬಾರದು ಎಂದು ಕಲ್ಮಾಡಿ ನುಡಿದರು.
"ಭಾರತ ಸರ್ಕಾರ, ಕ್ರೀಡಾ ಸಚಿವರು ಹಾಗೂ ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಎಲ್ಲರೂ ಕ್ರೀಡಾಕೂಟವನ್ನು ಬೆಂಬಲಿಸುತ್ತಿದ್ದಾರೆ. ಎಲ್ಲಾ ಸ್ಥಳಗಳು ನಿರ್ದಿಷ್ಟ ಸಮಯಕ್ಕೆ ಸಿದ್ಧವಾಗಲಿವೆ. ಈ ಹಿಂದೆ ಭರವಸೆ ನೀಡಿರುವಂತೆ ಎಲ್ಲಾ ಮೂಲಸೌಕರ್ಯಗಳೂ ಪೂರ್ಣಗೊಳ್ಳಲಿವೆ" ಎಂದು ಅವರು ತಿಳಿಸಿದರು.
ಶೀಲಾದೀಕ್ಷಿತ್ ಭಯ ಕಾಮನ್ವೆಲ್ತ್ ಕ್ರೀಡಾ ಪ್ರತಿಷ್ಠಾನದ ಅಧ್ಯಕ್ಷ ಮೈಖೆಲ್ ಫೆನ್ನೆಲ್ ಅವರು ಎಲ್ಲವೂ ಸೂಕ್ತವಾಗಿ ನಡೆಯುವಂತೆ ಪ್ರಧಾನಿಯವರು ಹಸ್ತಕ್ಷೇಪ ನಡೆಸಬೇಕು ಎಂಬುದಾಗಿ ಹೇಳಿರುವ ಬಳಿಕ ಕ್ರೀಡಾಕೂಟದ ಸಿದ್ಧತೆಯ ಕುರಿತು ತನಗೆ ಭಯವಾಗಿದೆ ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಸೋಮವಾರ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಕಲ್ಮಾಡಿಯವರ ಈ ಹೇಳಿಕೆ ಹೊರಬಿದ್ದಿದೆ.
ಕ್ರೀಡಾಕೂಟದ ಸಿದ್ಧತೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಿದ್ದ ಶೀಲಾ ದೀಕ್ಷಿತ್ "ಕಾಮಗಾರಿಗಳ ಕುರಿತು ತೃಪ್ತಿಯಿದೆ. ಆದರೆ ನರ್ವಸ್ ಆಗಿದ್ದೇನೆ" ಎಂದು ಹೇಳಿದ್ದರು.