ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಕಾನಮಿ ದರ್ಜೆಯಲ್ಲೇ ತಾನೂ ಪ್ರಯಾಣಿಸಿದ ಸೋನಿಯಾ (Sonia Gandhi | travels | economy class | Mumbai)
 
PTI
ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಕಾಂಗ್ರೆಸ್‌ನ ಉದ್ದೇಶದಂತೆ, ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ದೆಹಲಿಯಿಂದ ಮುಂಬೈಗೆ ಇಕಾನಮಿ ದರ್ಜೆಯಲ್ಲಿ ಪ್ರಯಾಣಿಸುವ ಮೂಲಕ ವೆಚ್ಚಉಳಿತಾಯದ ಅಭಿಯಾನಕ್ಕೆ ತನ್ನ 'ಕೊಡುಗೆ' ನೀಡಿದ್ದಾರೆ.

ವಿಮಾನದ ಎರಡು ಸಾಲಿನ ಸೀಟುಗಳು ಸೋನಿಯಾ ಹಾಗೂ ಅವರ ಭದ್ರತಾ ಸಿಬ್ಬಂದಿಗಳಿಗೆ ಮೀಸಲಿರಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಅಕ್ಟೋಬರ್ 13ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಚಾರ ಆರಂಭಿಸಲು ಅವರು ಮುಂಬೈ ಪ್ರಯಾಣ ಬೆಳಿಸಿದ್ದಾರೆ.

ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ ಸಾಮಾನ್ಯವಾಗಿ ಇಂಡಿಯನ್ ಏರ್‍ಫೋರ್ಸಿನ ವಿಷೇಶ ವಿಮಾನಗಳಲ್ಲೇ ಪ್ರಯಾಣ ಮಾಡುತ್ತಾರೆ. ಆದರೆ ಈ ಬಾರಿ ಕಮರ್ಷಿಯಲ್ ವಿಮಾನ ಹತ್ತಿದ್ದು, ಇಕಾನಮಿ ದರ್ಜೆಯಲ್ಲಿ ಕುಳಿತಿದ್ದಾರೆ.

ರಾಷ್ಟ್ರವು ಬರಪರಿಸ್ಥಿತಿ ಹಾಗೂ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಕಾರಣ ಸೋನಿಯಾ ಗಾಂಧಿ ಅವರು ತಮ್ಮ ಇಫ್ತಾರ್ ಕೂಟವನ್ನೂ ಸಹ ರದ್ದು ಪಡಿಸಿದ್ದಾರೆ. ಗೃಹಸಚಿವಾಲಯವು ವಿಐಪಿಗಳ ಭದ್ರತೆಯ ಪರಿಶೀಲನೆ ನಡೆಸುತ್ತಿರುವ ವೇಳೆಯಲ್ಲೇ ಸೋನಿಯಾರ ಕ್ರಮ ಹೊರಬಿದ್ದಿದೆ. 51 ಸಚಿವರು ಹಾಗೂ ವಿಐಪಿಗಳ ಭದ್ರತಾ ವ್ಯವಸ್ಥೆಯನ್ನು ಈಗಾಗಲೇ ಕುಂಠಿತಗೊಳಿಸಲಾಗಿದೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ