ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚುನಾವಣಾ ಫಲಿತಾಂಶ: ಬಿಜೆಪಿ ಬಾಸ್‌ ಫುಲ್‌ಖುಷ್ (BJP President | Rajnath Singh | assembly | by-polls)
 
NRB
ವಿವಿಧ ರಾಜ್ಯಗಳಲ್ಲಿ ಹೊರಬಿದ್ದಿರುವ ಉಪಚುನಾವಣಾ ಫಲಿತಾಂಶಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶಗಳಿಂದಾಗಿ ಬಿಜೆಪಿಯು ಸುಲಭ ವಿಕೆಟ್ ಅಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

"ವಿವಿಧ ರಾಜ್ಯಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಬಿಜೆಪಿಯು ರಾಜ್ಯಗಳಲ್ಲಿ ತನ್ನ ನೆಲೆಕಳೆದುಕೊಳ್ಳುತ್ತಿದೆ ಎಂಬುದಾಗಿ ಯಾರೂ ಹೇಳುವಂತಿಲ್ಲ, ಬಿಜೆಪಿಯು ಎಲ್ಲಾ ರಾಜ್ಯಗಳಲ್ಲೂ ಉತ್ತಮ ಸಾಧನೆ ತೋರಿದೆ" ಎಂಬುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ಗುಜರಾತ್ ಮಾತ್ರವಲ್ಲ, ಉತ್ತರಖಂಡ್, ಮಧ್ಯಪ್ರದೇಶಗಳಂತಹ ರಾಜ್ಯಗಳಲ್ಲೂ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂಬುದನ್ನು ಉಪಚುನಾವಣಾ ಫಲಿತಾಂಶಗಳು ತಿಳಿಸಿವೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಗುಜರಾತಿನ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಐದು ಹಾಗೂ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಸೆಪ್ಟೆಂಬರ್ 10ರಂದು ಚುನಾನವಣೆಗಳು ನಡೆದಿದ್ದವು. ಚುನಾವಣೆ ನಡೆದ ಆರು ಸ್ಥಾನಗಳು ಕಾಂಗ್ರೆಸ್ ವಶದಲ್ಲಿದ್ದವು. ಒಂದು ಮಾತ್ರ ಬಿಜೆಪಿಯದ್ದಾಗಿತ್ತು. ಆದರೆ ಇದೀಗ ಎರಡು ಸ್ಥಾನಗಳು ಮಾತ್ರ ಕಾಂಗ್ರೆಸ್‌‍ಗೆ ಲಭಿಸಿದ್ದು, ಮಿಕ್ಕ ಐದು ಬಿಜೆಪಿ ಪಾಲಾಗಿದೆ. ಇದೇ ವೇಳೆ ಮಧ್ಯಪ್ರದೇಶ ಹಾಗೂ ಉತ್ತರಖಂಡ್‌‌ನಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ರಾಜ್ಯಗಳಲ್ಲಿಯೂ ಬಿಜೆಪಿ ಆಡಳಿತವಿದೆ.
ND

ಪ್ರಸಕ್ತ ಚುನಾವಣಾ ಫಲಿತಾಂಶದಿಂದಾಗಿ 182ಸ್ಥಾನ ಬಲದ ಗುಜರಾತ್ ವಿಧಾನ ಸಭೆಯಲ್ಲಿ ಪಕ್ಷಗಳ ಬಲಾಬಲ ಇದೀಗ ಹೀಗಿದೆ. ಬಿಜೆಪಿ 122, ಕಾಂಗ್ರೆಸ್ 54 ಹಾಗೂ ಇತರ ಆರು. ಲೋಕಸಭಾ ಚುನಾವಣಾ ಫಲಿತಾಂಶದಿಂದ ಕಳೆ ಗುಂದಿದ್ದ ಬಿಜೆಪಿ ಆಡಳಿತದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಫಲಿತಾಂಶ ಅತಿದೊಡ್ಡ ಸಮಾಧಾನ ತಂದಿದೆ. ಲೋಕಸಭೆ ಮಾತ್ರವಲ್ಲದೆ ಜುನಾಗಢ ನಗರಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಕಾಂಗ್ರೆಸ್ ಎದುರು ಮುಖಭಂಗ ಅನುಭವಿಸಿತ್ತು.

ಗುಜರಾತಿನ ಜಸ್ದಾನ್, ಚೊಟಿಲಾ, ದೇಗಮ್, ದಾಂಚ ಮತ್ತು ಸಮಿ ಹರೀಜ್ ಸ್ಥಾನಗಳನ್ನು ಕಾಂಗ್ರೆಸ್‌ನಿಂದ ಬಿಜೆಪಿ ಕಸಿದುಕೊಂಡಿದೆ. ಇದೇ ವೇಳೆ ಕೊಡಿನರ್ ಕ್ಷೇತ್ರವನ್ನು ಬಿಜೆಪಿ ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಗಿದ್ದರೆ, ತನ್ನ ವಶದಲ್ಲಿದ್ದ ಧೋರಜಿ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ