ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಂತರ್ಜಾಲ ಫೋನ್ ನಿರ್ಬಂಧಕ್ಕೆ ಐಬಿ ನಿರ್ದೇಶನ (Intelligence Bureau | Net telephon | Government)
 
ಎಲ್ಲಾ ಇಂಟರ್ನೆಟ್ ಟೆಲಿಫೋನ್ ಸೇವೆ(VoIP)ಗಳನ್ನು ನಿರ್ಬಂಧಿಸುವಂತೆ ಗುಪ್ತಚರ ಸಂಸ್ಥೆಯು ಸಂಪರ್ಕ ಸಚಿವಾಲಯವನ್ನು ವಿನಂತಿಸಿದೆ. ದೂರಸಂಪರ್ಕ ಇಲಾಖೆಯು ಇಂತಹ ಕರೆಗಳನ್ನು ಪತ್ತೆಹಚ್ಚುವಂತಹ ತಾಂತ್ರಿಕತೆಯನ್ನು ಅಳವಡಿಸುವ ತನಕ ದೇಶದಿಂದ ಹೊರಹೋಗುವ ಮತ್ತು ಒಳಬರುವಂತಹ ಕರೆಗಳನ್ನು ನಿರ್ಬಂಧಿಸುಂತೆ ಹೇಳಿದೆ.

ದೇಶೀಯ ಹಾಗೂ ಅಂತಾರಾಷ್ಟ್ರೀಯ ಅಂತರ್ಜಾಲ ಫೋನ್ ಕರೆಗಳನ್ನು ಪತ್ತೆ ಮಾಡುವ ಸಾಮರ್ಥ್ಯವನ್ನು ಸದ್ಯಕ್ಕೆ ರಾಷ್ಟ್ರವು ಹೊಂದಿಲ್ಲ ಎಂದು ಹೇಳಿರುವ ಗುಪ್ತಚರ ಸಂಸ್ಥೆಯು ರಾಷ್ಟ್ರದ ಭದ್ರತಾ ಹಿತದೃಷ್ಟಿಯಿಂದ ಈ ವಿಚಾರಕ್ಕೆ ಶೀಘ್ರ ಪರಿಹಾರ ಕಂಡುಹುಡುಕುವಂತೆ ದೂರಸಂಪರ್ಕ ಇಲಾಖೆಗೆ ನಿರ್ದೇಶನ ನೀಡಿದೆ.

ಕಾಲರ್ ಲೈನ್ ಐಡೆಂಟಿಫಿಕೇಶನ್ ವ್ಯವಸ್ಥೆ ಇಲ್ಲದ ಕಾರಣ ಯಾವ ದೇಶ ಅಥವಾ ಯಾವ ಸ್ಥಳದಿಂದ ಈ ಕರೆಯನ್ನು ನೀಡಲಾಗಿದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಹಲವಾರು ಸೇವಾ ಒದಗಕರು ಇಂತಹ ದೇಶಿ ಹಾಗೂ ವಿದೇಶಿ ಕರೆಗಳ ಸೌಲಭ್ಯವನ್ನು ನೀಡುತ್ತಿರುವ ಕಾರಣ ಕರೆಗಳ ಸಂಖ್ಯೆ ಹೆಚ್ಚಿದೆ. ಇಂತಹ ಕರೆಗಳು ಹಾದು ಹೋಗುವ VoIP/IP ಮಾರ್ಗಗಳು ಅಸಮರ್ಪಕ ನಿಯತಾಂಕಗಳನ್ನು ಹೊಂದಿರುವ ಕಾರಣ ಕರೆಮಾಡಿದವರನ್ನು ಪತ್ತೆ ಮಾಡಲಾಗುತ್ತಿಲ್ಲ. ಹಾಗಾಗಿ ಇದಕ್ಕೊಂದು ತಾಂತ್ರಿಕ ಪರಿಹಾರ ಕಂಡುಹುಡುಕುವ ತನಕ ಇಂತಹ ಕರೆಗಳನ್ನು ನಿರ್ಬಂಧಿಸಿ ಎಂಬುದಾಗಿ ದೂರಸಂಪರ್ಕ ಇಲಾಖೆಗೆ ಬರೆದಿರುವ ಪತ್ರದಲ್ಲಿ ಭದ್ರತಾ ಸಂಸ್ಥೆ ಹೇಳಿದೆ.

ಸಾವಿರಾರು ಗ್ರಾಹಕರು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಅಂತರ್ಜಾಲ ಕರೆಗಳನ್ನು ಅವಲಂಭಿಸಿದ್ದು, ಒಂದೊಮ್ಮೆ ಸಂಪರ್ಕ ಇಲಾಖೆಯು ಐಬಿಯ ನಿರ್ದೇಶನವನ್ನು ಜಾರಿಗೆ ತಂದರೆ ಇಂತಹ ಗ್ರಾಹಕರಿಗೆ ಅತಿದೊಡ್ಡ ನಷ್ಟ ಉಂಟಾಗಲಿದೆ. ಅಂತರ್ಜಾಲ ಕರೆಗಳ ಮೂಲಕ ಫೋನ್‌ಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಹಾಗೂ ಕಂಪ್ಯೂಟರ್‌ಗಳಿಗೆ ಉಚಿತವಾಗಿ ಕರೆ ಮಾಡಬಹುದಾಗಿದೆ. ಹಲವಾರು ಕಂಪೆನಿಗಳು ಈ ಸೇವೆಯನ್ನು ಒದಗಿಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ