ನವದೆಹಲಿ: ಸಿಕ್ಕಿಂನಲ್ಲಿ ಇತ್ತೀಚೆಗೆ ಚೀನದ ಪಡೆಗಳು ಭಾರತದತ್ತ ಗುಂಡು ಹಾರಿಸಿದ್ದು ಈ ವೇಳೆ ಐಟಿಬಿಪಿ ಜವಾನರು ಗಾಯಗೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂಬುದಾಗಿ ಸರ್ಕಾರ ಮಂಗಳವಾರ ಹೇಳಿದೆ.
"ಲೈನ್ ಆಫ್ ಆಕ್ಚುವಲ್ ಕಂಟ್ರೋಲ್(ಎಲ್ಎಸಿ)ನಲ್ಲಿ ಗುಂಡುಹಾರಿಸಿದ ಕಾರಣ ಐಟಿಬಿಪಿ ಜವಾನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿರುವುದು ಗಮನಕ್ಕೆ ಬಂದಿದ್ದು, ಈ ವರದಿಯು ಸರಿಯಲ್ಲ" ಎಂಬುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ವಿಷ್ಣು ಪ್ರಕಾಶ್ ಹೇಳಿದ್ದಾರೆ.
ಚೀನ ಪಡೆಗಳು ಉತ್ತರ ಸಿಕ್ಕಿಂನ ಕೇರಂಗ್ ಎಂಬಲ್ಲಿ ಗುಂಡು ಹಾರಿಸಿದ್ದು ಇಬ್ಬರು ಐಟಿಬಿಪಿ ಜವಾನರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.