ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾಯಕರು ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಿ: ಲಾಲೂ ಸಲಹೆ (Austerity drive | Lalu Prasad | Manmohan Singh | Sonia Gandhi)
 
PTI
ಒಬ್ಬಬ್ಬೊರಂತೆ ಕಾಂಗ್ರೆಸ್ ನಾಯಕರು, ಸಚಿವರು ಮಿತವ್ಯಯವನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಲು ಮುಂದಾಗಿದ್ದು, ದಿನನಿತ್ಯವೆಂಬಂತೆ ಸುದ್ದಿಯಾಗುತ್ತಿದೆ. ಆದರೆ, ಇದರಿಂದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸಮಾಧಾನ ಗೊಂಡಂತೆ ತೋರುತ್ತಿಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ವಿಮಾನಗಳನ್ನು ಬಿಟ್ಟು ರೈಲಿನಲ್ಲಿ ಪ್ರಯಾಣಿಸಲಿ ಎಂದು ಸಲಹೆ ನೀಡಿದ್ದಾರೆ.

ಪ್ರಧಾನಿ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರುಗಳು ಇತರರಿಗೆ ಮಿತವ್ಯಯದ ಪಾಠ ಮಾಡುವ ಮುನ್ನ ತಾವು ಸ್ವತಹ ರೈಲುಗಳ ಸಾಮಾನ್ಯದರ್ಜೆ ಬೋಗಿಯಲ್ಲಿ ಪ್ರಯಾಣಿಸುವ ಮೂಲಕ ಗಾಂಧೀಜಿಯವರ ಮಿತವ್ಯಯ ಮಾದರಿಯನ್ನು ಅಳವಡಿಸಿಕೊಂಡು ಮಾದರಿಯಾಗಬೇಕು ಎಂದು ಹೇಳಿದ್ದಾರೆ.

ಸೋನಿಯಾಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಸ್ಪೀಕರ್ ಮೀರಾ ಕುಮಾರ್ ಹಾಗೂ ಇತರ ಎಲ್ಲಾ ಉನ್ನತಸ್ಥಾನದಲ್ಲಿರುವ ವ್ಯಕ್ತಿಗಳು ಗಾಂಧಿ ಮಾದರಿಯ ಮಿತವ್ಯಯ ಹಾಗೂ ಸರಳ ಜೀವನಕ್ರಮವನ್ನು ಅನುಸರಿಸಲು ಮುಂದಾದರೆ ಇತರರೂ ಖಂಡಿತವಾಗಿಯೂ ಇದೇ ಹಾದಿಯನ್ನು ಹಿಡಿಯುತ್ತಾರೆ ಎಂದು ಹೇಳಿದ್ದಾರೆ.

ನೀವು ವ್ಯಂಗ್ಯವಾಗಿ ಈ ಸಲಹೆ ನೀಡುತ್ತಿರುವಿರೇ ಎಂಬುದಾಗಿ ಲಾಲೂ ಪ್ರಸಾದ್‌ರನ್ನು ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಲಾಲೂ, "ನಾನು ಇದನ್ನು ಅತ್ಯಂತ ಗಂಭೀರವಾಗಿಯೇ ಹೇಳುತ್ತಿದ್ದೇನೆ" ಎಂದರು.

ಮಹಾತ್ಮಗಾಂಧಿಯವರು ಯಾವಾಗಲೂ ತೃತೀಯ ದರ್ಜೆಯ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು. ಮತ್ತು ತಮ್ಮ ಜೀವನದುದ್ದಕ್ಕೂ ಸರಳ ಜೀವನ ಕ್ರಮವನ್ನೇ ಅನುಸರಿಸಿದ್ದರು ಎಂಬುದಾಗಿ ಬಿಹಾರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರಣಬ್ ಮುಖರ್ಜಿ ಹಾಗೂ ಸೋನಿಯಾ ಗಾಂಧಿ ಅವರುಗಳು ಇತ್ತೀಚೆಗೆ ವಿಮಾನಗಳ ಇಕಾನಮಿ ದರ್ಜೆಯಲ್ಲಿ ಪ್ರಯಾಣಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು ಇದೂ ಸಹ ಸರ್ಕಾರದ ಬೊಕ್ಕಸಕ್ಕೆ ಅತೀವ ಹೊರೆಯಾಗುತ್ತದೆ ಎಂದು ನುಡಿದರು.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ