ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಸಭೆ: ತಮಿಳು ಉತ್ತರಕ್ಕೆ ಅವಕಾಶವಿಲ್ಲ (Loksabha | Tamil | Azagiri | DMK)
 
ಲೋಕಸಭೆಯಲ್ಲಿ ಕೇಳುವ ಪ್ರಶ್ನೆಗಳಿಗೆ ತಮಿಳಿನಲ್ಲಿ ಉತ್ತರಿಸಲು ಅವಕಾಶ ಕೋರಿ ಡಿಎಂಕೆ ಪಕ್ಷದ ಸಚಿವರು ಸಲ್ಲಿಸಿದ್ದ ಮನವಿಯನ್ನು ಲೋಕಸಭೆ ಸಚಿವಾಲಯ ತಳ್ಳಿಹಾಕಿದಿದೆ. ಅದಾಗ್ಯೂ, ಡಿಎಂಕೆ ಸಂಸದರು ತಮಿಳು ಭಾಷೆಯಲ್ಲೆ ಪ್ರಶ್ನೆ ಕೇಳಬಹುದು ಹಾಗೂ ಭಾಷಣ ಮಾಡಬಹುದಾಗಿದೆ ಎಂಬುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.

"ಸದನದ ನಿಯಮಾವಳಿಯಂತೆ ಸಚಿವರು ಪ್ರಶ್ನೆಗಳಿಗೆ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲೆ ಉತ್ತರ ನೀಡಬೇಕು" ಎಂದು ಲೋಕಸಭೆ ಮಹಾ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ವಿವರಿಸಿದ್ದಾರೆ. ಸಚಿವರು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಮತ್ತು ಭಾಷಣ ಮಾಡಲು ಸಂವಿಧಾನ ಅವಕಾಶ ಕಲ್ಪಿಸಿದೆ. ಆದರೆ, ಪ್ರಶ್ನೆಗಳಿಗೆ ಉತ್ತರ ನೀಡುವುದು ಇದರಲ್ಲಿ ಒಳಗೊಂಡಿಲ್ಲ ಆಚಾರಿ ಹೇಳಿದ್ದಾರೆ.

ಡಿಎಂಕೆ ಸಚಿವರು ತಮಿಳಿನಲ್ಲೆ ಉತ್ತರಿಸಲು ಅವಕಾಶ ನೀಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಂ.ಕೆ. ಅಳಗಿರಿ ಅವರು ಲೋಕಸಭೆ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿರುವ ಲೋಕಸಭಾ ಸಚಿವಾಲಯ ತಮಿಳಿನಲ್ಲಿ ಉತ್ತರಿಸಲು ಅವಕಾಶವಿಲ್ಲ ಎಂದು ಹೇಳಿದೆ. ಇದಕ್ಕೆ ಉತ್ತರವನ್ನು ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಸಿದ್ಧಪಡಿಸುವ ಕಾರಣ ಅವಕಾಶ ನಿರಾಕರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ