ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸದ್ಯವೇ ಆಸ್ಟ್ರೇಲಿಯಾದೊಂದಿಗೆ ಚರ್ಚಿಸಲಾಗುವುದು: ಕೃಷ್ಣ (External Affairs | SM Krishna | Melbourne | Australian)
 
ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಮತ್ತೆ ದಾಳಿ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರು ಈ ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಈ ಕುರಿತು ಶೀಘ್ರವೇ ಆಸ್ಟ್ರೇಲಿಯ ಸರ್ಕಾರದ ಜತೆಗೆ ಚರ್ಚಿಸುವುದಾಗಿ ಹೇಳಿದ್ದಾರೆ.

"ಇವುಗಳು ದುರದೃಷ್ಟಕರ ಘಟನೆಗಳು. ನಾವು ಸದ್ಯವೇ ಈ ವಿಚಾರನ್ನು ಆಸ್ಟ್ರೇಲಿಯ ಸರ್ಕಾರದೊಂದಿಗೆ ಚರ್ಚಿಸಲಿದ್ದೇವೆ" ಎಂಬುದಾಗಿ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಸದ್ಯ ಬೆಲರುಸ್ ಪ್ರವಾಸದಲ್ಲಿರುವ ಕೃಷ್ಣ, ಈ ವಿಚಾರವನ್ನು ಸಂಪೂರ್ಣ ಗಂಭೀರತೆಯಿಂದ ಪರಿಶೀಲಿಸುವುದಾಗಿ ಹೇಳಿದ್ದಾರೆ. ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಗಾಗಿ ಕೃಷ್ಣ ಬೆಲರುಸ್‌ಗೆ ತೆರಳಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಸಿಟ್ಟಿನಿಂದ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂಬುದಾಗಿ ಆಸ್ಟ್ರೇಲಿಯ ಪ್ರಧಾನಿ ಕೆವಿನ್ ರುಡ್ ಅವರು ಭಾರತೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿರುವ ಬೆನ್ನಿಗೆ ಸಚಿವರ ಹೇಳಿಕೆ ಹೊರಬಿದ್ದಿದೆ.

ನಾಲ್ವರು ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆಯನ್ನು ವಿರೋಧಿಸುತ್ತಾ ಖ್ಯಾತ ಬರಹಗಾರ ಫಾರೂಕ್ ದೋಂಡಿ ಅವರು, ರಾಷ್ಟ್ರದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸ್ವಲ್ಪ ಪ್ರತಿರೋಧ ಒಡ್ಡಬೇಕು ಎಂದು ಒತ್ತಾಯಿಸಿದ್ದರ ಹಿನ್ನೆಲೆಯಲ್ಲಿ ರುಡ್ ಹೇಳಿಕೆ ಹೊರಬಿದ್ದಿತ್ತು.

ಆಸ್ಟ್ರೇಲಿಯಾವು ಕಾನೂನಿಗೆ ಬದ್ಧವಾಗಿರುವ ರಾಷ್ಟ್ರವಾಗಿದ್ದು, ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಲಾರೆವು ಎಂದು ರುಡ್ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ