ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ರಮ ಅಂಗಾಂಗ ಕಸಿಗೆ 10 ವರ್ಷ ಕಠಿಣ ಶಿಕ್ಷೆ: ಅಜಾದ್ (Gulam nabi Azad | Doctors | mideator | Human organs)
 
ಮಾನವ ಅಂಗಾಂಗಗಳ ಅಕ್ರಮ ಕಸಿ ವ್ಯವಹಾರದಲ್ದಿ ತೊಡಗಿಸಿಕೊಳ್ಳುವ ವೈದ್ಯರು ಹಾಗೂ ದಲ್ಲಾಳಿಗಳಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವುದಾಗಿ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಘೋಷಿಸಿದ್ದಾರೆ. ಮಾನವ ಅಂಗಾಂಗ ಕಸಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಂಪುಟ ಅನುಮತಿ ನೀಡಿದ ತಕ್ಷಣ ಆರೋಗ್ಯ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

ತಮ್ಮ ಇಲಾಖೆಯ 100 ದಿನಗಳ ಸಾಧನೆಯ ಕುರಿತು ಮಾಹಿತಿ ಹಂಚಿಕೊಂಡ ಅವರು, ತಿದ್ದುಪಡಿಯ ಬಳಿಕ ಈ ಕಾಯ್ದೆ ರೋಗಿಗಳಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆ ಎಂದು ಹೇಳಿದರು. ಇದೇ ವೇಳೆ ರಾಷ್ಟ್ರದಲ್ಲಿ ತಾಂಡವವಾಡುತ್ತಿರುವ ಹಂದಿಜ್ವರದ ಬಗ್ಗೆ ಪ್ರಸ್ತಾಸಿದ ಅವರು "ಎಚ್1ಎನ್1ಗೆ ಲಸಿಕೆ ಕಂಡುಹಿಡಿಯುವುದರ ಜತೆಗೆ ಎಲ್ಲ ರೀತಿಯ ಇನ್‌ಫ್ಲುಯೆಂಜಾಗಳಿಗೆ ಲಸಿಕೆ ಕಂಡುಹಿಡಿಯಲು ಸಹ ಭಾರತ ಯತ್ನಿಸುತ್ತಿದೆ" ಎಂದು ತಿಳಿಸಿದರು.

ಎಂಬಿಬಿಎಸ್ ಉತ್ತೀರ್ಣರಾದ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿದಲ್ಲಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚುವರಿ ಅಂಕ ನೀಡಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ