ಹೇಳಿದ ಮಾತನ್ನು ಕೇಳದ, ಮೈದುನನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಪತ್ನಿಯನ್ನು ಸಿಟ್ಟಿಗೆದ್ದ ಪತಿಯೊಬ್ಬ ಬಹುಮಹಡಿ ಕಟ್ಟದಿಂದ ಕೆಳಗೆ ತಳ್ಳಿ ಕೊಂದು ಹಾಕಿರುವ ಘಟನೆ ಮುಂಬೈಯಲ್ಲಿ ಸಂಭವಿಸಿದೆ.
ದೀಪಂಕರ್ ಮಂಡಲ್ ಎಂಬಾತ ವೃತ್ತಿಯಿಂದ ಪೇಂಟರ್. ಆತ ಮರೋಲ್‌ನ ವಿಜಯನಗರದಲ್ಲಿ ನಿರ್ಮಾಣವಾಗುತ್ತಿದ್ದ ವುಡ್‌ಲ್ಯಾಂಡ್ಸ್ ಎಂಬ ಕಟ್ಟಡದಲ್ಲಿ ಕೆಲಸಮಾಡುತ್ತಿದ್ದು, ಅದೇ ಕಟ್ಟಡದ ಎಂಟನೇ ಮಹಡಿಯಿಂದ ತನ್ನ ಪತ್ನಿಯನ್ನು ಹೊರತಳ್ಳಿದ್ದು, ಕೆಳಗೆ ಬಿದ್ದಿರುವ ಆಕೆ ಅದೇ ಕ್ಷಣದಲ್ಲಿ ಸತ್ತು ಹೋಗಿದ್ದಾಳೆ. ಈ ದುರ್ಘಟನೆ ಬುಧವಾರ ರಾತ್ರಿ ಸಂಭವಿಸಿದ್ದರೂ, ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಆದರೆ ತನ್ನ ಈ ಕಾರ್ಯಕ್ಕೆ ದೀಪಂಕರ್‌ಗೆ ಯಾವುದೇ ವಿಷಾದವಿಲ್ಲ. "ನನ್ನ ತಮ್ಮನೊಂದಿಗೆ ಪತ್ನಿಗೆ ಅಕ್ರಮ ಸಂಬಂಧವಿತ್ತು ಎಂಬುದನ್ನು ತಿಳಿದ ಬಳಿಕ ತಾನು ಈ ಕೃತ್ಯ ಎಸಗಿದ್ದೇನೆ. ಇದಲ್ಲದೆ, ಶೀಘ್ರ ಹಣ ಸಂಪಾದನೆಗಾಗಿ ಆಕೆ ನವಿ ಮುಂಬೈಯಲ್ಲಿ ಬಾರ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂಬುದನ್ನು ತಿಳಿದಾ ತಾನು ಇನ್ನಷ್ಟು ವ್ಯಗ್ರಗೊಂಡೆ" ಎಂಬುದಾಗಿ ಆತ ಹೇಳಿಕೊಂಡಿದ್ದಾನೆ. ದೀಪಂಕರ್ ಹಾಗೂ ಆತನ ಪತ್ನಿ ತುಂಪಾ ಕೋಲ್ಕತಾದಿಂದ ಇಲ್ಲಿಗೆ ಬಂದು ವಾಸ್ತವ್ಯ ಹೂಡಿದ್ದಾರೆ.
ಮಹಿಳೆಯ ಶವಒಂದು ಬಿದ್ದಿದೆ ಎಂಬ ಪೋನ್ ಕರೆಯಾಧರಿಸಿ ಕಾರ್ಯಚರಣೆ ನಡೆಸಿದ್ದ ಪೊಲೀಸರು ದೀಪಂಕರ್‌ರನ್ನು ಬಂಧಿಸಿದ್ದರು. ಹೇಳಿಕೆ ನೀಡುವ ವೇಳೆಗೆ ಆತ ಗೋಳೋ ಎಂದು ಅತ್ತಿದ್ದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
"2000 ವರ್ಷದಲ್ಲಿ ಇವರು ವಿವಾಹಿತರಾಗಿದ್ದು, ದೀಪಂಕರ್ ತನ್ನ ಪತ್ನಿಯನ್ನು ಮುಂಬೈಗೆ ಕರೆತಂದಿದ್ದ. ಆದರೆ ತುಂಪಾ ತನ್ನ ತಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ದೀಪಂಕರ್ ಪತ್ನಿಯನ್ನು ಆಕೆಯ ತವರಿನಲ್ಲಿ ಬಿಟ್ಟು ಬಂದಿದ್ದ. ಕೆಲವು ತಿಂಗಳ ಬಳಿಕ, ವಿಚ್ಛೇದನಕ್ಕಾಗಿ ಆಕೆಯನ್ನು ಮತ್ತೆ ಕರೆತಂದಿದ್ದ. ಆದರೆ ತುಂಪಾ ವಿಚ್ಛೇದನ ಕಾಗದ ಪತ್ರಗಳಿಗೆ ಸಹಿ ಹಾಕಲು ನಿರಾಕರಿಸಿದ್ದಳು ಅಷ್ಟೇ ಅಲ್ಲ, ಮೈದುನನೊಂದಿಗಿನ ಸಂಬಂಧವನ್ನು ಬಹಿರಂಗ ಪಡಿಸುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಳು" ಎಂಬುದಾಗಿ ದೀಪಂಕರ್ ಹೇಳಿರುವುದಾಗಿ ಡಿಸಿಪಿ ಪ್ರಕಾಶ್ ಮುತ್ಯಾಲ್ ಹೇಳಿದ್ದಾರೆ.
ಬುಧವಾರ ರಾತ್ರಿ ಇವರನ್ನು ತಾರಸಿಯಲ್ಲಿ ನೋಡಿದ್ದ ಕಾವಲುಗಾರ ಇವರನ್ನು ಅಲ್ಲಿಂದ ಕಳುಹಿಸಿದ್ದ. ಆದರೆ ರಾತ್ರಿಯೂಟದ ಬಳಿಕ ವಿಚ್ಛೇದನ ಪತ್ರಕ್ಕೆ ಸಹಿಹಾಕುವಂತೆ ಮನ ಒಲಿಸಲು ಆಕೆಯನ್ನು ಮತ್ತೆ ತಾರಸಿಗೆ ಕರೆತಂದಿದ್. ಆದರೆ ಆಕೆ ಇದಕ್ಕೆ ನಿಕಾರಿಸಿದಾಗ ಪತ್ನಿಯನ್ನು ತಾರಸಿಯಿಂದ ಕೆಳತಳ್ಳಿದನೆಂದು ಪೊಲೀಸಧಿಕಾರಿಗಳು ತಿಳಿಸಿದ್ದಾರೆ.