ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರೀತಿಸದ ಹುಡುಗಿಯ ಹೆತ್ತವರನ್ನು ಕೊಂದ ಭಗ್ನಪ್ರೇಮಿ (Love | Muder | Rajamandri | Andra pradesh)
 
ತಾನು ಪ್ರೀತಿಸಿದ್ದ ಹುಡುಗಿ ತನ್ನನ್ನು ಕ್ಯಾರೇ ಅನ್ನದಿದ್ದಾಗ, ವ್ಯಗ್ರಗೊಂಡ ಹದಿಹರೆಯದ ಭಗ್ನ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಕೊಲೆಗೆ ಯತ್ನಿಸಿದ್ದಾನಲ್ಲದೆ, ಇದನ್ನು ತಡೆಯಲು ಬಂದ ಬಾಲಕಿಯ ತಂದೆ ಹಾಗೂ ತಾಯಿಯನ್ನು ಕೊಂದು ಹಾಕಿರುವ ದಾರುಣ, ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಸಂಭವಿಸಿದೆ.

ರಾಜೇಶ ಎಂಬ 18ರ ಹರೆಯದ ಯುವಕ ಇಂತಹ ಘೋರ ಅಪರಾಧ ಎಸಗಿದ್ದಾನೆ. ತನ್ನ ನೆರೆಮನೆಯ ಹುಡುಗಿ ಅನೂಷಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ತನ್ನ ಪ್ರೀತಿಯನ್ನು ಸ್ವೀಕರಿಸುವಂತೆ ಹುಡುಗಿಯನ್ನು ಪೀಡಿಸುತ್ತಿದ್ದ. ಆದರೆ ಆತನ ಒತ್ತಾಯಕ್ಕೆ ಈ ಹುಡುಗಿ ಸೊಪ್ಪು ಹಾಕಿರಲಿಲ್ಲ. ಪ್ರತಿನಿತ್ಯ ಮನೆಯ ಬಳಿಗೆ ಬಂದು ನಿಲ್ಲುವುದು, ಗೋಡೆಯ ಮೇಲೆ ತನ್ನ ಹಾಗೂ ಆಕೆಯ ಹೆಸರನ್ನು ಬರೆಯುವುದು ಈ ಮುಂತಾದ ಚೇಷ್ಟೆಗಳಿಂದೆಲ್ಲ ನೊಂದ ಹುಡುಗಿಯ ಹೆತ್ತವರು ಆ ಪ್ರದೇಶದಿಂದಲೇ ತಮ್ಮ ವಾಸ್ತವ್ಯವನ್ನು ಇನ್ನೊಂಡೆಗೆ ಬದಲಾಯಿಸಿದ್ದರು.

ಇವರು ಮನೆ ಬದಲಾಯಿಸಿದ್ದರೂ, ಹೊಸ ಮನೆಗೆ ಶುಕ್ರವಾರ ಮುಂಜಾನೆ ಬಂದಿರುವ ರಾಜೇಶ ಹುಡುಗಿಯನ್ನು ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ್ದಾನೆ. ಇದನ್ನು ತಡೆಯಲು ಅನೂಷಳ ತಂದೆ ಹಾಗೂ ತಾಯಿ ಮುಂದಾದಾಗ ಅವರಿಬ್ಬರ ಕತ್ತು ಸೀಳಿ ಕೊಂದೇ ಹಾಕಿದ್ದಾನೆ.

ರೊಚ್ಚಿಗೆದ್ದ ನೆರೆಹೊರೆಯ ಜನತೆ ರಕ್ತಸಿಕ್ತವಾಗಿದ್ದ ಈ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಂಭೀರ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ