ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಛತ್ತೀಸ್‌ಗಢ: ಹೆಣ್ಣುಮಗುವನ್ನು ನದಿಗೆಸೆದ ದುರುಳ ತಂದೆ (Father | Newborn | river | Chhattisgarh)
 
ಹೆಣ್ಣೆಂಬ ಕಾರಣಕ್ಕೆ ನವಜಾತ ಶಿಶುವೊಂದನ್ನು ಜನ್ಮದಾತ ತಂದೆಯೇ ನದಿಗೆಸೆದಿರುವ ದುರ್ಘಟನೆ ಛತ್ತೀಸ್‌ಗಢದ ದುರ್ಗಾ ಜಿಲ್ಲೆಯಲ್ಲಿ ಸಂಭವಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

"ತಾನು ಗಂಡು ಮಗುವನ್ನು ನಿರೀಕ್ಷಿಸುತ್ತಿದ್ದು, ಹೆಣ್ಣುಮಗು ಜನಿಸಿದ ಕಾರಣ ಅದನ್ನು ಶಿವನಾಥ್ ನದಿಗೆ ಎಸೆದಿರುವುದಾಗಿ ಮಗುವಿನ ತಂದೆ ಪ್ರೇಮ್‌ಜೀತ್ ದೇಶ್‌ಮುಖ್ ಎಂಬಾತ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಗುರುವಾರ ತಡರಾತ್ರಿ ಬಂದಿಸಿದ್ದೇವೆ" ಎಂಬುದಾಗಿ ದುರ್ಗ ಪೊಲೀಸ್ ವರಿಷ್ಠಾಧಿಕಾರಿ ದೀಪಾಂಶು ಕಬ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನದಿಯಲ್ಲಿ ಮಗುವಿನ ಮೃತದೇಹವು ಸೆಪ್ಟೆಂಬರ್ ಆರರಂದು ಪತ್ತೆಯಾಗಿದ್ದು ಇದನ್ನು ಭೀಮರಾವ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ಮಗುವನ್ನು ಕೊಲೆ ಮಾಡಲಾಗಿದೆ ಎಂಬುದಾಗಿ ವೈದ್ಯರು ದೃಢಪಡಿಸಿದ್ದರು.

"ದುರ್ಗ ಜಿಲ್ಲೆಯ ಆಸ್ಪತ್ರೆಯಲ್ಲಿ ಹೆರಿಗೆಯಾದ ಎಲ್ಲಾ ಮಹಿಳೆಯರ ವಿಳಾಸವನ್ನು ಆಸ್ಪತ್ರೆಗಳ ದಾಖಲೆಗಳಿಂದ ಪಡೆದು ಅವರ ಮನೆಗಳಿಗೆ ತೆರಳಿದ್ದೆವು. ಭಿಲೈ ನಗರದ ಸುಪೇಲ ಎಂಬಲ್ಲಿನ ಕೀರ್ತಿ ದೇಶ್‌ಮುಖ್ ಸೆಪ್ಟೆಂಬರ್ 2ರಂದು ಜನ್ಮ ನೀಡಿದ ಹೆಣ್ಣು ಮಗುವಿನ ಪತ್ತೆ ಇರಲಿಲ್ಲ" ಎಂಬುದಾಗಿ ಪೊಲೀಸಧಿಕಾರಿ ಹೇಳಿದ್ದಾರೆ.

ಪ್ರೇಮಜೀತ್ ದೇಶ್‌ಮುಖ್ ಎಂಬಾತ ಟ್ರಕ್ ಚಾಲಕನಾಗಿದ್ದು, ಇದೀಗಾಗಲೇ ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದು, ಮೂರನೆಯದ್ದೂ ಹೆಣ್ಣಾದ ಕಾರಣ ಅಸಂತುಷ್ಟನಾಗಿದ್ದ. ಆತ ತನ್ನ ಮಹಿಳಾ ಸಂಬಂಧಿಯೊಬ್ಬಾಕೆಯ ಸಹಾಯ ಪಡೆದು ಮಗುವನ್ನು ಸೆಪ್ಟೆಂಬರ್ ಆರರಂದು ಮಗುನ್ನು ನದಿಗೆಸೆದಿದ್ದ" ಎಂಬುದಾಗಿ ಕಬ್ರಾ ತಿಳಿಸಿದ್ದಾರೆ.

ಪ್ರೇಮಜೀತ್ ಮತ್ತು ಆತನ ಮಹಿಳಾ ಸಂಬಂಧಿಯನ್ನು ಬಂಧಿಸಲಾಗಿದೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ