ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಂ, ಕ್ರಿಶ್ಚಿಯರನ್ನರನ್ನು ವಿರೋಧಿಸುವುದು ಹಿಂದುತ್ವವಲ್ಲ: ಭಾಗ್ವತ್ (RSS | Hindu | Mohan Bhagwat | Hindutva)
 
ತನ್ನ ಆಪ್ತ ರಾಜಕೀಯ ಪಕ್ಷಗಳು 'ಹಿಂದುತ್ವ' ಅಥವಾ 'ಹಿಂದೂ' ಪದಗಳ ಬಳಕೆಯಿಂದಾಗಿ ಕಡಿಮೆ ಮತ ಗಳಿಸಿದರೂ ಸಂಘ ಪರಿವಾರವು ಈ ಶಬ್ಧಗಳ ಬಳಕೆಯನ್ನು ನಿಲ್ಲಿಸುವುದಿಲ್ಲ; ಮುಸ್ಲಿಮ್ ಅಥವಾ ಕ್ರಿಶ್ಚಿಯನರನ್ನು ವಿರೋಧಿಸುವುದು ಹಿಂದುತ್ವವಲ್ಲ. ಹಿಂದುತ್ವವೆಂದರೆ ಅದು ಜೀವನ ಕ್ರಮ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ತಿಳಿಸಿದ್ದಾರೆ.

ಹಿಂದೂ ಶಬ್ಧದ ಅರ್ಥವನ್ನು ಬೇರೆ ಯಾವುದೇ ಶಬ್ಧವು ನೀಡದ ಕಾರಣ ನಮಗೆ ಇಂದು ಹಿಂದೂ ಎಂಬ ಶಬ್ಧ ಅತ್ಯಗತ್ಯವಾಗಿದೆ. ಅದನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲಾರೆವು. ವಿಶ್ವ ಹಿಂದೂ ಪರಿಷತ್ ಕೂಡ ಆ ಶಬ್ಧವನ್ನು ಬಿಡಲಾರದು. ಹಿಂದೂ ಶಬ್ಧ ಸತ್ಯವನ್ನು ಪ್ರತಿಬಿಂಬಿಸುವ ಕಾರಣ ನಾವು ಅದನ್ನು ಯಾವತ್ತೂ ಈ ಶಬ್ಧವನ್ನು ಬಳಸುತ್ತೇವೆ ಎಂದು ಹಿಂದುತ್ವ ಸೆಮಿನಾರ್ ಒಂದರಲ್ಲಿ ಭಾಗವಹಿಸಿದ್ದ ಭಾಗ್ವತ್ ಸ್ಪಷ್ಟಪಡಿಸಿದ್ದಾರೆ.
PTI


ಹಿಂದೂ ಶಬ್ಧವನ್ನು ಬಳಸುವುದರಿಂದ ನಾವು ಕಡಿಮೆ ಓಟುಗಳನ್ನು ಪಡೆಯುತ್ತೇವೆಯಾದರೆ ಯಾಕೆ ಆ ಶಬ್ಧ ಬಳಕೆಯನ್ನು ನಿಲ್ಲಿಸಬಾರದು ಎಂದು ಸಭೆಯೊಂದರಲ್ಲಿ ನನ್ನನ್ನು ಪ್ರಶ್ನಿಸಲಾಯಿತು. ಇದನ್ನು ಯಾರಿಗೆ ಮತಗಳ ಅಗತ್ಯವಿದೆಯೋ ಅವರಲ್ಲಿ ಕೇಳಿ ಎಂದು ನಾನು ಹೇಳಿದೆ. ನೀವು ಬದಲಾಗಬೇಕು ಎಂದು ಅವರು ಹೇಳಿದರು. ಅದು ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಹಿಂದುತ್ವದಿಂದಾಗಿ ನಾವು ಕಡಿಮೆ ಜನಪ್ರಿಯತೆ ಗಳಿಸಿದರೂ ಅಥವಾ ಕೆಳಗೆ ಹೋದರೂ ಚಿಂತೆಯಿಲ್ಲ, ನಾವು ಸತ್ಯದೊಂದಿಗೆ ಜಯಿಸುತ್ತೇವೆ ಅಥವಾ ಸತ್ಯದೊಂದಿಗೆ ಕೆಳಗಿಳಿಯುತ್ತೇವೆ ಎಂದು ಭಾಗ್ವತ್ ನುಡಿದರು.

ಯಾರನ್ನೂ ಓಲೈಸುವ ಅಗತ್ಯ ನಮಗಿಲ್ಲ. ಹಿಂದುತ್ವವನ್ನು ನಾವು ಬಳಸುತ್ತಿರುವುದು ಓಟು ಪಡೆಯಲಲ್ಲ. ನಾವು ಚುನಾವಣೆಗಳಲ್ಲಿ ಸ್ಪರ್ಧಿಸುವುದೂ ಇಲ್ಲ. ಅಲ್ಲದೆ ಯಾವ ಜನಪ್ರಿಯತೆಯ ಅಗತ್ಯವೂ ನಮಗಿಲ್ಲ ಎಂದು ಅವರು ಆರ್‌ಎಸ್‌ಎಸ್ ನಿಲುವನ್ನು ಸ್ಪಷ್ಟಪಡಿಸಿದರು.

ಮುಸ್ಲಿಮ್ ಅಥವಾ ಕ್ರಿಶ್ಚಿಯನರನ್ನು ವಿರೋಧಿಸುವುದು ಹಿಂದುತ್ವವಲ್ಲ. ಹಿಂದುತ್ವವೆಂದರೆ ಅದು ಜೀವನ ಕ್ರಮ-- ಅಹಿಂಸೆ ಮತ್ತು ಸತ್ಯವೇ ಅದರ ಮೂಲತತ್ವ ಎಂದು ಭಾಗ್ವತ್ ತಿಳಿಸಿದ್ದಾರೆ.

ಅಸ್ವಾಭಾವಿಕ ವಾತಾವರಣವನ್ನು ಸೃಷ್ಟಿಸುವವರಿಗೆ, ವೈಯಕ್ತಿಕ ಸ್ವಾತಂತ್ರ್ಯವನ್ನು ದಮನ ಮಾಡುವವರಿಗೆ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ಪಡೆಗಳಿಗೆ ಹಿಂದುತ್ವವೆನ್ನುವುದು ಉತ್ತರ. ಅಲ್ಲದೆ ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಕೂಡ ಹಿಂದೂಗಳೇ ಪೂರ್ವಿಕರು ಎಂದರು.

ಹಿಂದುತ್ವ ಎಂದರೇನು ಎಂಬುದನ್ನು ವ್ಯಾಖ್ಯಾನಿಸುವುದಕ್ಕಿಂತ ಹಿಂದೂ ಯಾರು ಎಂಬುದನ್ನು ವಿವರಿಸುವುದು ಹೆಚ್ಚು ಕ್ಲಿಷ್ಟಕರ. ಈ ಶಬ್ಧ ಕಾಲ ಕಾಲಕ್ಕೆ ತನ್ನ ನಿರೂಪನೆಯನ್ನು ಬದಲಾಯಿಸುತ್ತಿರುತ್ತದೆ ಎಂದು ಭಾಗ್ವತ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ