ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೂಜಿಗಾಗಿ ಮಗಳನ್ನೆ ಪಣವಾಗಿಟ್ಟ ಆಧುನಿಕ 'ಯುಧಿಷ್ಠಿರ' (Mahabharata | Ismail Sk | Mustafa Sk | MALDA | Satyajit Bandyopadhyay | Gambler)
 
PTI
ಮಹಾಭಾರತದಲ್ಲಿ ಯುಧಿಷ್ಠಿರ ಜೂಜಿನಲ್ಲಿ ದ್ರೌಪದಿಯನ್ನು ಪಣವಾಗಿಟ್ಟಿರುವ ಬಗ್ಗೆ ಕೇಳಿದ್ದೀರಿ . ಆದರೆ ಇಂದಿನ ಕಾಲದಲ್ಲಿ ಮಹಾಭಾರತದ ಪುನರಾವರ್ತನೆಯಾಗುವುದೆಂದರೆ ಆಶ್ಚರ್ಯವಲ್ಲವೇ .ಜೂಜನ್ನೆ ಜೀವಾಳವಾಗಿಸಿಕೊಂಡ ವ್ಯಕ್ತಿಯೊಬ್ಬ ತನ್ನಲ್ಲಿರುವ ಹಣವನ್ನು ಕಳೆದುಕೊಂಡ ನಂತರ ತನ್ನ ಮಗಳನ್ನೇ ಪಣವಾಗಿಟ್ಟ ಘಟನೆ ವರದಿಯಾಗಿದೆ.

ಮಲ್ಡಾದ ಇಂಗ್ಲೀಷ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸತ್ಘಾರಿಯಾ ಗ್ರಾಮದ ಇಸ್ಮಾಯಿಲ್ ಎನ್ನುವ ಜೂಜುಪ್ರಿಯ ವ್ಯಕ್ತಿ, ನೆರೆಯ ಗ್ರಾಮದ ಮುಸ್ತಫಾ ಎನ್ನುವ ವ್ಯಕ್ತಿಯೊಂದಿಗೆ ಜೂಜಾಟವಾಡಿ ಹಣವನ್ನೆಲ್ಲಾ ಕಳೆದುಕೊಂಡರೂ ಮಗಳನ್ನು ಪಣಕ್ಕಿಟ್ಟು ಅದೃಷ್ಟ ಪರೀಕ್ಷಿಸುವುದಾಗಿ ಹೇಳಿ ಆಟವನ್ನು ಮುಂದುವರಿಸಿದನು. ಆದರೆ ಮುಸ್ತಫಾ ಆಟದಲ್ಲಿ ಗೆದ್ದಿದ್ದರಿಂದ ಇಸ್ಮಾಯಿಲ್ ಅವರ ಮಗಳನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದ ಘಟನೆ ವರದಿಯಾಗಿದೆ.

ಪ್ರತ್ಯಕ್ಷದರ್ಶಿಗಳು ಗ್ರಾಮಸ್ಥರಿಗೆ ಹಾಗೂ ಪಂಚಾಯತಿಗೆ ಮಾಹಿತಿ ನೀಡಿ, ಮಾರನೇ ದಿನ ಕೆಲ ಗ್ರಾಮಸ್ಥರ ಗುಂಪು ನೆರೆಯ ಗ್ರಾಮವಾದ ಸುಲ್ತಾನಪುರಕ್ಕೆ ತೆರಳಿದಾಗ ಮುಸ್ತಫಾ ಮನೆಯಲ್ಲಿರಲಿಲ್ಲ. ಆದರೆ ಮನೆಯಲ್ಲಿದ್ದ ಯುವತಿಯನ್ನು ಗ್ರಾಮಸ್ಥರು ಮರಳಿ ಗ್ರಾಮಕ್ಕೆ ಕರೆತಂದಿದ್ದಾರೆ.

ಜೂಜಿನ ಘಟನೆಯನ್ನು ತಿಳಿದ ಇಸ್ಮಾಯಿಲ್ ತಂದೆ ನಯಿಮುದ್ದೀನ್, ಕೋಪೋದ್ರಿಕ್ತನಾಗಿ ಮಗನನ್ನು ಮನೆಯಿಂದ ಹೊರಹಾಕಿದ್ದಾನೆ ಎನ್ನಲಾಗಿದೆ. ನನ್ನ ಮಗಳು ಕಾಲೇಜಿಗೆ ಹೋಗುತ್ತಿರುವುದರಿಂದ ಅವಳ ಭವಿಷ್ಯದ ಬಗ್ಗೆ ಚಿಂತೆಯಾಗಿದೆ ಎಂದು ಇಸ್ಮಾಯಿಲ್ ಪತ್ನಿ ಕಳವಳ ವ್ಯಕ್ತಪಡಿಸಿದ್ದಾಳೆ.

ಪಂಚಾಯತ್ ಸದಸ್ಯ ಮೊಹಮ್ಮದ್ ಸೈದುರ್ ರಹಮಾನ್ ಮಾತನಾಡಿ, ಇಸ್ಮಾಯಿಲ್ ಕುಖ್ಯಾತ ಜೂಜುಕೋರನಾಗಿದ್ದು, ಈ ಹಿಂದೆ ಕೂಡಾ ಹಲವಾರು ಬಾರಿ ಎಚ್ಚರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಈ ಬಾರಿ ಮನುಷ್ಯತ್ವದ ಗಡಿಯನ್ನೇ ಮೀರಿದ್ದಾನೆ. ಜೂಜಾಡುವುದು ಗ್ರಾಮಸ್ಥರ ದಿನನಿತ್ಯದ ಕಾರ್ಯವಾಗಿ ದೊಡ್ಡ ತಲೆನೋವಾಗಿದೆ . ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದಿದ್ದಾರೆ.

ಮಲ್ಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತ್ಯಜಿತ್ ಬಂಡೋಪಾದ್ಯಾಯ ಮಾತನಾಡಿ, ಮಾಧ್ಯಮಗಳಿಂದ ನಮಗೆ ಮಾಹಿತಿ ತಿಳಿದು ಬಂದಿದೆ. ಆದರೆ ಇಲ್ಲಿಯವರೆಗೆ ದೂರು ದಾಖಲಾಗಿಲ್ಲ. ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೊಲೀಸ್ ತಂಡವನ್ನು ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ