ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರನ್ನು ಸುಪ್ರೀಂಕೋರ್ಟ್‌ಗೆ ನೇಮಿಸುವ ಕುರಿತು ನಿರ್ಧರಿಸಲು ಸಭೆ ಸೇರಿದ್ದ ನ್ಯಾಯಮೂರ್ತಿಗಳ ಸಮಿತಿ ಯಾವುದೇ ನಿರ್ಧಾರ ತಳೆದಿಲ್ಲ ಎಂದು ಸುಪ್ರೀಂ ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ತಿಳಿಸಿದ್ದಾರೆ.
ಈ ಕುರಿತು ಚರ್ಚಿಸಲಾಯಿತು. ಆದರೆ, ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಮ್ಮ ಸಿಬ್ಬಂದಿ ಮೂಲಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಕೆ.ಜಿ.ಬಾಲಕೃಷ್ಣನ್ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ನ್ಯಾಯಮೂರ್ತಿಗಳಾದ ಬಿ.ಎನ್.ಅಗರವಾಲ್, ಎಸ್.ಎಚ್.ಕಪಾಡಿಯಾ, ತರುಣ್ ಚಟರ್ಜಿ ಹಾಗಾ ಅಲ್ತಮನ್ ಕಬೀರ್ ಭಾಗವಹಿಸಿದ್ದರು.
ಸುಪ್ರೀಂಕೋರ್ಟ್ ಸಮಿತಿ ಈಗಾಗಲೇ ದಿನಕರನ್ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವುದರಿಂದ ಸರ್ಕಾರದ ಪ್ರತಿಕ್ರಿಯೆಗಾಗಿ ಕೋರ್ಟ್ ಕಾಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನೇಮಕಕ್ಕೆ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡಿದ ಮೇಲೆ ಮತ್ತೆ ಹಿಂದಕ್ಕೆ ಪಡೆಯುವ ಅವಕಾಶ ಇಲ್ಲ.