ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೀನಾ ಅತಿಕ್ರಮಣ: ಅತಿರಂಜನೆ ಬೇಡವೆಂದ ಪ್ರಧಾನಿ (China | Manmohan | Narayanan | Border)
 
ಭಾರತದ ಗಡಿಯೊಳಕ್ಕೆ ಚೀನಾ ಅತಿಕ್ರಮಣಗಳು ಹೆಚ್ಚುತ್ತಿರುವ ವರದಿಗಳನ್ನು ತಳ್ಳಿಹಾಕಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಈ ವರದಿಗಳಿಂದ ಉದ್ಭವಿಸಿದ ಬಿಸಿ ತಾಪಮಾನವನ್ನು ತಣಿಸಲು ಯತ್ನಿಸಿದ್ದಾರೆ. ಈ ಕುರಿತು ಆತಂಕಪಡಲು ಯಾವುದೇ ಕಾರಣವಿಲ್ಲ ಮತ್ತು ಮಾಧ್ಯಮಗಳಲ್ಲಿ ಚೀನಾ ಅತಿಕ್ರಮಣಗಳ ಬಗ್ಗೆ ರಂಜನೀಯವಾಗಿ ವರ್ಣಿಸಲಾಗಿದೆಯೆಂದು ಹೇಳಿದ್ದಾರೆ.

ಇಲ್ಲಿ ತಮ್ಮ ನಿವಾಸದಲ್ಲಿ ಇಫ್ತರ್ ಕೂಟದಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಸಿಂಗ್, ಗಡಿಯಲ್ಲಿ ಯಾವುದೇ ಗಂಭೀರ ವಿದ್ಯಮಾನ ನಡೆದ ಬಗ್ಗೆ ಮಾಹಿತಿಗಳಿಲ್ಲದಿರುವುದರಿಂದ ಆತಂಕ ಪಡಲು ಕಾರಣವಿಲ್ಲ ಎಂದು ಹೇಳಿದರು.

ಚೀನಾ ಗಡಿ ಉಲ್ಲಂಘನೆ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ವರ್ಣಿಸಲಾಗಿದ್ದು, ಚೀನಾ ಆಕ್ರಮಣಕಾರಿ ಅತಿಕ್ರಮಣಗಳನ್ನು ನಡೆಸಿದೆ ಮತ್ತು ಗಡಿಯಲ್ಲಿ ಚೀನಾ ಪಡೆಗಳು ಗುಂಡಿನ ದಾಳಿ ಕೂಡ ನಡೆಸಿವೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸರ್ಕಾರ ಅದನ್ನು ನಿರಾಕರಿಸುತ್ತಲೇ ಇದೆ.ಚೀನಾದ ರಾಯಭಾರಿ ಝಾಂಗ್ ಯಾನ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರನ್ನು ಭೇಟಿ ಮಾಡಿದ್ದು, ಉಭಯತ್ರರು ಫಲಪ್ರದ ಮಾತುಕತೆ ನಡೆಸಿದರೆಂದು ಸಿಂಗ್ ಹೇಳಿದ್ದು, ಚೀನಾದ ಉನ್ನತ ಮಟ್ಟದ ನಾಯಕರ ಜತೆ ತಾವು ಸಂಪರ್ಕದಲ್ಲಿರುವುದಾಗಿ ಹೇಳಿದರು.

ಚೀನಾದ ಗಡಿಯಲ್ಲಿ ಪ್ರಮಾದವೇನೂ ಸಂಭವಿಸಿಲ್ಲವೆಂದು ಸರ್ಕಾರದ ಮಾಹಿತಿ ವ್ಯವಸ್ಥೆ ಸಂದೇಶ ನೀಡುವುದರಲ್ಲಿ ವಿಫಲವಾಗಿದ್ದೇ, ಮಾಧ್ಯಮದ ಉತ್ಪ್ರೇಕ್ಷಿತ ವರದಿಗಳಿಗೆ ಕಾರಣವೆಂದು ಹೇಳಿದ ಅವರು, ಈ ತಪ್ಪನ್ನು ಶೀಘ್ರದಲ್ಲೇ ಸರಿಪಡಿಸುವುದಾಗಿ ನುಡಿದರು.ಮಾಧ್ಯಮಗಳ ವರದಿಯಿಂದ ಉದ್ಭವಿಸಿದ ಬಿಸಿಯನ್ನು ತಣಿಸಲು ಪ್ರಧಾನಿ ಯತ್ನಿಸಿದರೂ, ಚೀನಾ ಕಡೆಯಿರುವ ಗಡಿಯಲ್ಲಿ ಶೀಘ್ರ ಅಭಿವೃದ್ಧಿ ಮಾಡುವ ಬಗ್ಗೆ ಭಾರತ ಕಾಳಜಿ ವಹಿಸಿದ್ದು, ಆ ಪ್ರದೇಶದ ಮ‌ೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲು ಯತ್ನಿಸಲಾಗುತ್ತಿದೆ.

ಲಡಖ್ ವಲಯದಲ್ಲಿ ಮತ್ತು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಸಂಪರ್ಕ ಸುಧಾರಣೆಗೆ ಯತ್ನಿಸುವುದಲ್ಲದೇ, ಸರ್ಕಾರವು ಚೀನಾ ಗಡಿಯಲ್ಲಿ 30,000 ಪಡೆಗಳನ್ನು ಹೊಂದಿರುವ ಎರಡು ಪರ್ವತ ತುಕಡಿಗಳನ್ನು ನಿಯೋಜಿಸಲು ಸೇನೆ ಹಸಿರು ನಿಶಾನೆ ತೋರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ