ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತಿರಂಜಿತ: ಪ್ರಧಾನಿಗೆ ದನಿಗೂಡಿಸಿದ ನಾರಾಯಣನ್ (Media | Army | Narayanan | Hype)
 
ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನದ ಸೇನೆಯ ಇತ್ತೀಚಿನ ಅತಿಕ್ರಮಣಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಕೂಡ ಹಗುರವಾಗಿ ತೆಗೆದುಕೊಂಡಿದ್ದಾರೆ. ಮಾಧ್ಯಮಗಳು ಚೀನದ ಅತಿಕ್ರಮಣದ ಬಗ್ಗೆ ಅತಿರಂಜಿತ ವರ್ಣನೆ ಮಾಡುವುದರಿಂದ ಆಕಸ್ಮಿಕ ಘಟನೆ ಅಥವಾ ಅಪಘಾತ ಸಂಭವಿಸಬಹುದಾಗಿದ್ದು, ನೆರೆದೇಶದೊಂದಿಗೆ ಸಮಸ್ಯೆ ಸೃಷ್ಟಿಸುತ್ತದೆಂದು ಅವರು ಖಾರವಾಗಿ ಹೇಳಿದ್ದಾರೆ.

ಅತಿಕ್ರಮಣಗಳು ನಡೆಯುತ್ತಿರುವುದೇನೋ ನಿಜ. ಅಂತಹ ಚಟುವಟಿಕೆ ಅಷ್ಟೇನೂ ಉಲ್ಬಣಿಸಿಲ್ಲ ಮತ್ತು ಪರಿಸ್ಥಿತಿ ಅಪಾಯಕಾರಿಯಾಗಿಲ್ಲ ಎಂದು ನಾರಾಯಣನ್ ಹೇಳಿದರು. ಚೀನಾ ಅತಿಕ್ರಮಣಗಳ ಮ‌ೂಲಕ ಭಾರತದ ಒತ್ತಡ ಹೇರಲು ಪ್ರಯತ್ನಿಸುತ್ತಿದೆಯೆಂಬ ವರದಿಗಳನ್ನು ಎನ್‌ಎಸ್‌ಎ ಅಲ್ಲಗಳೆದಿದ್ದಾರೆ. 2009ನೇ ಇಸವಿಯ ಭಾರತವು 1962ಕ್ಕೆ ಸೇರಿದ ಭಾರತವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ಗಡಿಯಲ್ಲಿ ಶಾಂತಿ ಕಾಪಾಡಲು ಎರಡೂ ರಾಷ್ಟ್ರಗಳು ಆಸಕ್ತಿ ಹೊಂದಿವೆಯೆಂದು ತಿಳಿಸಿದರು.

.ಅತಿಕ್ರಮಣಗಳ ಸಂಖ್ಯೆಗೆ ಸಂಬಂಧಪಟ್ಟಂತೆ ಅಷ್ಟೊಂದು ಹೆಚ್ಚಳವಾಗಿಲ್ಲ. ಹಿಂದಿನದಕ್ಕಿಂತ ಒಳನುಸುಳುವಿಕೆ ಸ್ವಲ್ಪ ಆಳವಾಗಿರಬಹುದು. ಇಡೀ ಪ್ರಕರಣದ ಬಗ್ಗೆ ನಾವು ಒಳ್ಳೆಯ ತಿಳಿವಳಿಕೆ ಹೊಂದಿದ್ದೇವೆ ಎಂದು ನಾರಾಯಣನ್ ಡೆವಿಲ್ಸ್ ಅಡ್ವೊಕೇಟ್ ಕಾರ್ಯಕ್ರಮದಲ್ಲಿ ಕರಣ್ ಥಾಪರ್‌ಗೆ ತಿಳಿಸಿದರು. ಈ ಪ್ರಶ್ನೆಯ ಬಗ್ಗೆ ಮಾಧ್ಯಮಗಳಲ್ಲಿ ಅತಿರಂಜಿತ ವರದಿಗಳು ಪ್ರಕಟವಾಗುತ್ತಿರುವ ಬಗ್ಗೆ ವಿವರಿಸಲು ತಾವು ಅಸಮರ್ಥರಾಗಿದ್ದಾಗಿ ಅವರು ನುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ