ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿವಿಐಪಿ ಬಂಗ್ಲೆಗಳ ನಿರ್ವಹಣೆಗೆ 100 ಕೋಟಿ ವೆಚ್ಚ (New Delhi | Bungalows | VVIP | Austerity)
 
ಕೇಂದ್ರ ಸರ್ಕಾರ ಜನಪ್ರತಿನಿಧಿಗಳಿಗೆ ಮಿತವ್ಯಯ ಕ್ರಮಗಳಿಗೆ ಒತ್ತಾಯಿಸುತ್ತಿರುವ ಬೆನ್ನಲ್ಲೇ ಇದೊಂದು ಕಣ್ಣೊರೆಸುವ ತಂತ್ರವೆಂದು ಟೀಕೆಟಿಪ್ಪಣಿಗಳು ಕೇಳಿಬಂದಿವೆ. ಆದರೆ ಸರ್ಕಾರ ಮಿತವ್ಯಯಕ್ಕೆ ಒತ್ತಾಯಿಸಲು ಬಹುಷಃ ಇನ್ನೊಂದು ಕಾರಣವೇನೆಂದರೆ, ಅತೀ ಗಣ್ಯವ್ಯಕ್ತಿಗಳ ಬಂಗ್ಲೆಗಳ ನಿರ್ವಹಣೆ ವೆಚ್ಚಕ್ಕೆ ಕಳೆದ 5 ವರ್ಷಗಳಲ್ಲಿ ಸುಮಾರು 100 ಕೋಟಿ ರೂ. ಖರ್ಚು ಮಾಡಿರುವ ಇತ್ತೀಚಿನ ಸರ್ಕಾರಿ ವರದಿಗಳು.

ಆರ್‌ಟಿಐ ಕೋರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ಕಳೆದ ಐದು ವರ್ಷಗಳಲ್ಲಿ ಸಂಸತ್ ಸದಸ್ಯರು ಮತ್ತು ಸಚಿವರ ಬಂಗ್ಲೆಗಳ ನವೀಕರಣ ಮತ್ತು ನಿರ್ವಹಣೆ ವೆಚ್ಚಕ್ಕೆ ಕನಿಷ್ಠ 93.50 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಹೇಳಿಕೆ ನೀಡಿದೆ. ವಿವಿಐಪಿಗಳ ಬಂಗ್ಲೆಗಳು ಐಷಾರಾಮಿ ಲುಟ್ಯೆನ್ಸ್ ವಲಯದಲ್ಲಿದೆ.

ಲೋಕೋಪಯೋಗಿ ಇಲಾಖೆ ಸಂಸತ್ ಸದಸ್ಯರು ವಾಸಿಸುವ ಈ ಬಂಗ್ಲೆಗಳ ದುರಸ್ತಿ ಮತ್ತು ಮೇಲ್ಜರ್ಜೆಗೆ ಏರಿಸಲು ಮೊತ್ತವನ್ನು ಖರ್ಚು ಮಾಡಿದೆಯೆಂದು ಎಸ್ಟೇಟ್ಸ್ ನಿರ್ದೇಶನಾಲಯ ಬಹಿರಂಗಮಾಡಿದೆ. ಸಂಸತ್ ಸದಸ್ಯರಿಗೆ ಮತ್ತು ಸಚಿವರಿಗೆ ಅವರ ಅಧಿಕಾರಾವಧಿಯಲ್ಲಿ ಉಚಿತ ವಸತಿಸೌಲಭ್ಯ ಕಲ್ಪಿಸಲಾಗುವುದು ಎಂದು ನಿರ್ದೇಶನಾಲಯ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ