ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಸ್ಸಾಂನಲ್ಲಿ 6.3 ತೀವ್ರತೆಯ ಭೂಕಂಪ (Assam | Richter | Earthquake | Mongar)
 
ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪವು ಅಸ್ಸಾಂನಲ್ಲಿ ಸೋಮವಾರ ಅಪ್ಪಳಿಸಿದೆ. ಮಧ್ಯಾಹ್ನ 2.23 ಗಂಟೆಗೆ ಕಂಪನ ಉಂಟಾಗಿದ್ದು, ಈ ಪ್ರದೇಶದಲ್ಲಿ ಭಯಭೀತ ವಾತಾವರಣ ಮ‌ೂಡಿಸಿದೆ. ಕಳೆದ 45 ದಿನಗಳಲ್ಲಿ ಐದನೇ ಕಂಪನದ ಅನುಭವ ಅಸ್ಸಾಂನಲ್ಲಿ ಉಂಟಾಗಿದೆ. ಭೂಕಂಪದ ಕೇಂದ್ರಬಿಂದು ಭೂತಾನ್ ತಿಂಪುಗೆ 180 ಕಿಮೀ ದೂರದ ಮೊಂಗಾರ್‌ನಲ್ಲಿತ್ತು ಎಂದು ಅಮೆರಿಕದ ಬೌಗೋಳಿಕ ಸಮೀಕ್ಷೆ ತಿಳಿಸಿದೆ.

ಮೊಂಗಾರ್ ಗುವಾಹಟಿಯ ವಾಯವ್ಯಕ್ಕೆ 125 ಕಿಮೀ ದೂರದಲ್ಲಿದೆ. ಭೂಕಂಪದಿಂದ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆದಾಗ್ಯೂ, ಗುವಾಹಟಿಯ ಕೆಲವು ಕಟ್ಟಡಗಳು ಜೋರಾಗಿ ಅದುರಿದ್ದರಿಂದ ಬಿರುಕುಗಳನ್ನು ಕಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಕಂಪನಗಳು ಸುಮಾರು 20 ಸೆಕೆಂಡುಗಳ ಕಾಲವಿದ್ದು, ಜನರಿಗೆ ಎರಡು ಕಂಪನಗಳ ಅನುಭವವಾಗಿ ಮನೆಯಿಂದ ಹೊರಗೋಡಿದರೆಂದು ತಿಳಿದುಬಂದಿದೆ.

ಏತನ್ಮಧ್ಯೆ, ಉತ್ತರ ಬಂಗಾಳದಲ್ಲಿ ಕೂಡ ಕಂಪನಗಳು ಉಂಟಾಗಿವೆಯೆಂದು ವರದಿಗಳು ತಿಳಿಸಿವೆ.ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಣಿಪುರ ಪ್ರಮುಖ ಭೂಕಂಪಪೀಡಿತ ವಲಯಗಳೆಂದು ಭೂಕಂಪತಜ್ಞರು ವಿಶ್ಲೇಷಿಸಿದ್ದಾರೆ. ಅಸ್ಸಾಂನಲ್ಲಿ 1897ರಲ್ಲಿ ರಿಕ್ಟರ್ ಮಾಪಕದಲ್ಲಿ 8.7 ತೀವ್ರತೆಯ ಅತ್ಯಂತ ಭೀಕರ ಭೂಕಂಪ ಸಂಭವಿಸಿ, 1600 ಜನರು ಬಲಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ