ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚ್ ಕಾ ಸಾಮ್ನಾ ನೋಡಿ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ (Sach Ka Saamna | Woman | Roopa Ganguly | Pallavi)
 
ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರದ ವಾದ ರಿಯಾಲಿಟಿ ಶೋ ಸಚ್ ಕಾ ಸಾಮ್ನಾದಲ್ಲಿ ನಟಿ ರೂಪಾ ಗಂಗೂಲಿ ಅವರನ್ನು ನೋಡಿದ ಬಳಿಕ ತೀವ್ರ ಪರಿಣಾಮಗೊಂಡ ಮಹಿಳೆಯೊಬ್ಬಾಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ತನ್ನ ಜೀವನವೂ ನಟಿಯ ಬದುಕಿಗೆ ವಿವಿಧ ರೀತಿಯಲ್ಲಿ ಸಾಮ್ಯತೆಯಿದೆ ಎಂದು ಭಾವಿಸಿದ ಮಹಿಳೆಯು ತಾನು ಒಬ್ಬ ಮಗಳಾಗಿ, ಪತ್ನಿಯಾಗಿ ಮತ್ತು ತಾಯಾಗಿ ವೈಫಲ್ಯ ಹೊಂದಿದ್ದೇನೆ ಎಂಬ ಭ್ರಮೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ಪಲ್ಲವಿ ಎಂಬ ಮಹಿಳೆ ಈ ವಿಪರೀತದ ನಿರ್ಧಾರ ಕೈಗೊಂಡಿದ್ದು, ಈಕೆಗೆ ಹನ್ನೆರಡು ವಯಸ್ಸಿನ ಮಗನಿದ್ದಾನೆ. ಈಕೆ ತನ್ನ ಮೊದಲ ಪತಿಯನ್ನು ತೊರೆದು ಧರ್ಮೇಂದ್ರ ಎಂಬ ವ್ಯಕ್ತಿಯೊಂದಿಗೆ ವಾಸ್ತವ್ಯವಿದ್ದರು. ಧರ್ಮೇಂದ್ರನೂ ತನ್ನ ಮೊದಲ ಪತ್ನಿಯನ್ನು ತೊರೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪಲ್ಲವಿಯು ಭಾನುವಾರ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸಧಿಕಾರಿಗಳು ಹೇಳಿದ್ದಾರೆ.

"ಶನಿವಾರ ಪ್ರಸಾರವಾದ ಸಚ್ ಕಾ ಸಾಮ್ನಾದಲ್ಲಿ ರೂಪಾ ಗಂಗೂಲಿಯ ಕಳೆದ ಹೋದ ಬದುಕಿನ ಕುರಿತು ಕೇಳಲಾದ ಪ್ರಶ್ನೆಗಳನ್ನು ಕೇಳಿ ಪಲ್ಲವಿ ಚಲಿಸಿ ಹೋಗಿದ್ದಳು. ಆದಾದ ಬಳಿಕ ಆಕೆ ಖಿನ್ನಳಾಗಿದ್ದಳು" ಎಂಬುದಾಗಿ ಧರ್ಮೇಂದ್ರ ಪೊಲೀಸರಿಗೆ ತಿಳಿಸಿದ್ದಾರೆ.

ಭಾನುವಾರ ಅಪರಾಹ್ನ ನೆರೆಮನೆಯವರು ಇವರ ಮನೆಗೆ ಬಂದು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಇದರಿಂದ ಚಿಂತಿತರಾದ ಅವರು ಧರ್ಮೇಂದ್ರರಿಗೆ ಕರೆನೀಡಿದ್ದರು. ಧರ್ಮೇಂದ್ರ ಅವರು ತಾಜ್ ಮಹಲ್‌ನಲ್ಲಿ ಫೋಟೋ ಸ್ಟುಡಿಯೋ ಒಂದನ್ನು ಹೊಂದಿದ್ದಾರೆ. ಮನೆಗೆ ಬಂದ ಅವರು ಬಾಗಿಲು ಒಡೆದು ನೋಡಿದಾಗ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು.

ಪಲ್ಲವಿ ತಾನು ಸಾಯುವ ಮುನ್ನ ಪತ್ರಒಂದನ್ನು ಬರೆದಿಟ್ಟಿದ್ದು, ಪತ್ರದಲ್ಲಿ "ಪ್ರಪಂಚದಲ್ಲಿ ನನ್ನನ್ನು ಹೊರತು ಪಡಿಸಿದರೆ ಎಲ್ಲರೂ ಚೆನ್ನಾಗಿದ್ದಾರೆ. ನಾನು ಒಬ್ಬ ಉತ್ತಮ ಮಗಳಾಗಿಲ್ಲ. ಉತ್ತಮ ಸಹೋದರಿಯಾಗಿಲ್ಲ, ಉತ್ತಮ ಪತ್ನಿಯಾಗಿಲ್ಲ. ಎಲ್ಲರಿಗೂ ನಾನು ಸಮಸ್ಯೆಯೇ ಆಗಿದ್ದೇನೆ. ಹಾಗಾಗಿ ನಾನು ಎಲ್ಲರಿಗಿಂತ ಬಹುದೂರ ಹೋಗುತ್ತಿದ್ದೇನೆ. ನನ್ನ ಪುತ್ರ ಕವಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ನನ್ನ ಸಾವಿನ ಕುರಿತು ನನ್ನ ಪತಿ ಹಾಗೂ ಪುತ್ರನಿಗೆ ತಿಳಿಸಿ. ಅವರು ನನ್ನ ಅಂತ್ಯಕ್ರಿಯೆಗೆ ಬರಬಹುದು" ಎಂಬುದಾಗಿ ಬರೆದಿದ್ದರು ಎಂಬುದಾಗಿ ಅವರು ಹೇಳಿದರು.

ಧರ್ಮೇಂದ್ರ ಉತ್ತಮ ವ್ಯಕ್ತಿ. ಅವರು ನನ್ನ ಬಗ್ಗೆ ಅತ್ಯಂತ ಕಾಳಜಿ ವಹಿಸಿದ್ದಾರೆ. ಆದರೆ ನಾನು ಅವರ ಕೀಪ್ ಆಗಿ ಮುಂದುವರಿಯಲು ಇಚ್ಚಿಸುವುದಿಲ್ಲ ಎಂದು ಪಲ್ಲವಿ ತನ್ನ ಪತ್ರದಲ್ಲಿ ಬರೆದಿದ್ದಾರೆ. ಆದರೆ ತನ್ನ ಸಾವಿಗೆ ಅವರು ಯಾರನ್ನೂ ಕಾರಣವಾಗಿಸಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ