ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಡುಗಡೆಗೆ ಒತ್ತಾಯಿಸಿ ರಾಜೀವ್ ಹಂತಕಿಯ ಉಪವಾಸ (Nalini | Rajeev Ganhdi | Assassin | Fast)
 
ರಾಜೀವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬಾಕೆಯಾಗಿರುವ ನಳಿನಿ ತನ್ನ ಬಿಡುಗಡೆದೆ ಒತ್ತಾಯಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾಳೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಕೆ ತಾನು ಜೀವವಾಧಿ ಶಿಕ್ಷೆಯ ಕನಿಷ್ಠ ಅವಧಿಯಾಗಿರುವ 14 ವರ್ಷವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ತನ್ನನ್ನು ಬಿಡುಗಡೆ ಮಾಡಬೇಕೆಂದು ಕೋರಿ ಇದೀಗಾಗಲೇ ಮನವಿ ಸಲ್ಲಿಸಿದ್ದಳು.

ಮರಣದಂಡನೆ ವಿಧಿಸಲ್ಪಟ್ಟಿದ್ದ ಈಕೆಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿಗಣಿಸಲಾಗಿತ್ತು. ಶಿಕ್ಷೆ ನೀಡಿದ ಸಂದರ್ಭದಲ್ಲಿ ಆಕೆ ಗರ್ಭಿಣಿಯಾಗಿದ್ದ ಕಾರಣ ಆಕೆಗೆ ವಿಧಿಸಲಾಗಿದ್ದ ಶಿಕ್ಷೆಯಲ್ಲಿ ಔದಾರ್ಯ ತೋರಲಾಗಿತ್ತು. ರಾಜೀವ್ ಗಾಂಧಿ ಕುಟುಂಬಿಕರು ಈಕೆಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂಬುದಾಗಿ ರಾಜೀವ್ ಗಾಂಧಿ ಕುಟುಂಬಿಕರು ಒತ್ತಾಯಿಸದ ಕಾರಣ ತನಗೆ ಬಿಡುಗಡೆ ಲಭಿಸಲಿದೆ ಎಂಬುದು ಆಕೆಯ ಇರಾದೆ.

ತಾನು 18 ವರ್ಷದಿಂದ ಜೈಲಿನಲ್ಲಿ ಕಾಲ ಕಳೆಯುತ್ತಿದ್ದೇನೆ, ಅಲ್ಲದೆ ತನಗೊಬ್ಬಳು ಮಗಳಿರುವ ಕಾರಣ ಬಿಡುಗಡೆ ನೀಡಬೇಕು ಎಂದು ಒತ್ತಾಯಿಸುತ್ತಿರುವ ಆಕೆ ತನ್ನ ಬಿಡುಗಡೆಯಾಗುವ ತನಕ ಉಪವಾಸ ಮಾಡುವುದಾಗಿ ಹೇಳಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ