ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಭಯೋತ್ಪಾದನಾ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು, ಗುಜರಾತ್‌ನಿಂದ ಒರಿಸ್ಸಾದ ತನಕ ರಾಷ್ಟ್ರದ ಕರಾವಳಿಯ ರಕ್ಷಣೆಗಾಗಿ, ಸೇನೆಯ ಪ್ರಮುಖರು ವಿಸ್ತೃತ ಯೋಜನೆಯನ್ನು ರೂಪಿದ್ದಾರೆ. ಅಲ್ಲದೆ, ಸೇನಾಪಡೆಯ ಯುದ್ಧ ಕೌಶಲ್ಯದ ಸಂಸ್ಕರಣಕ್ಕಾಗಿಯೂ ಯೋಜನೆ ರೂಪಿಸಿದ್ದಾರೆ.
ಕಳೆದ ವಾರ ಪುಣೆಯಲ್ಲಿ ನಡೆದ ಎಡು ದಿನಗಳ ಕವಾಯತಿನಲ್ಲಿ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಸೇರಿದಂತೆ ಉಳಿದ ಪ್ರಮುಖರು ಭಾಗವಹಿಸಿದ್ದು, ವ್ಯೂಹಗಳನ್ನು ರಚಿಸಿದ್ದಾರೆ.
ಪುಣೆಯಲ್ಲಿ ನಡೆದ ಈ ಮುಚ್ಚಿದ ಬಾಗಿಲಿನ ಕವಾಯತಿನಲ್ಲಿ ದೊಡ್ಡ ಪ್ರಮಾಣದ ನಕಾಶೆಗಳು ಮತ್ತು ಮರಳಿನ ಮಾದರಿಗಳನ್ನು ಬಳಸಿ ಕವಾಯತು ನಡೆಸಲಾಯಿತು ಎಂದು ಮೂಲಗಳು ಹೇಳಿವೆ.