ನ್ಯೂಯಾರ್ಕ್, ಮಂಗಳವಾರ, 22 ಸೆಪ್ಟೆಂಬರ್ 2009( 10:01 IST )
ಲಖನೌದ 13 ವರ್ಷದ ಬಾಲಕಿ ಯುಗರತ್ನ ಶ್ರೀವಾಸ್ತವ ವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯ ಕುರಿತ ಸಮಾವೇಶದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಚೀನಾ ಅಧ್ಯಕ್ಷ ಹು ಜಿಂಟಾವೊ ಸೇರಿದಂತೆ ವಿಶ್ವದ ನೂರಕ್ಕೂ ಹೆಚ್ಚು ಮುಖಂಡರ ಸಮ್ಮುಖದಲ್ಲಿ ಮಾತನಾಡುವ ಅವಕಾಶ ಪಡೆದಿದ್ದಾಳೆ. ವಿಶ್ವದ ಮೂರು ಶತಕೋಟಿ ಯುವಜನರು ಮತ್ತು ಮಕ್ಕಳ ಪರವಾಗಿ ಈಕೆ ವಿಶ್ವಸಂಸ್ಥೆಯಲ್ಲಿ ಮಂಗಳವಾರ ಭಾಷಣ ಮಾಡಲಿದ್ದಾಳೆ.