ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಲಕಿ ಶಿರಡಿ ಬಾಬಾ ಅವತಾರವೆಂದ 14 ಮಂದಿ ಬಂಧನ (Shiradi Baba | Madhisheela Sahu | Rayaghar)
 
ಬಾಲಕಿಯೊಬ್ಬಳಲ್ಲಿ ಶಿರಡಿ ಸಾಯಿಬಾಬಾ ಅವರ ಆವಾಹನೆಯಾಗಿದೆ ಎಂಬುದಾಗಿ ಜನರನ್ನು ಮರುಳುಗೊಳಿಸುತ್ತಿದ್ದ 14 ಮಂದಿ ಹಾಗೂ ಬಾಲಕಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಯಘಡ ಜಿಲ್ಲೆಯ ಖರ್ರಾ ಎಂಬ ಗ್ರಾಮದಲ್ಲಿ ಸಂಭವಿಸಿದೆ.

ಮಧುಶೀಲಾ ಸಾಹು ಎಂಬ 15ರ ಹರೆಯದ ಬಾಲಕಿಯ ಮೈಯಲ್ಲಿ ಕಳೆದೊಂದು ತಿಂಗಳಿಂದ ಶಿರಡಿ ಸಾಯಿಬಾಬಾ ಅವತರಿಸುತ್ತಿದ್ದಾರೆ ಎಂದು ಆಕೆಯ ಕುಟುಂಬದ ಸದಸ್ಯರು ಪ್ರಚಾರ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೊದಮೊದಲು ಈ ಕುರಿತು ಯಾರೂ ಗಮನಿಸದೇ ಇದ್ದರೂ, ಬಳಿಕದ ದಿನಗಳಲ್ಲಿ ಈಕೆಯನ್ನು ನೋಡಲು ಮತ್ತು ಆಶೀರ್ವಾದ ಪಡೆಯಲು ನೂರಾರು ಜನರು ಬಾಲಕಿಯ ಮನೆಗೆ ಬರತೊಡಗಿದರು. ಆದರೆ ಶಿರಡಿ ಬಾಬಾ ಆವಾಹನೆ ಸುಳ್ಳು ಮತ್ತು ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಗೊತ್ತಾದಾಗ ಎಲ್ಲರನ್ನೂ ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ