ಚೀನ ಗಡಿಯಲ್ಲಿ ಗುಂಡು: ವರದಿಮಾಡಿದ ಪತ್ರಕರ್ತರ ವಿರುದ್ಧ ಕೇಸು
ನವದೆಹಲಿ, ಮಂಗಳವಾರ, 22 ಸೆಪ್ಟೆಂಬರ್ 2009( 13:47 IST )
ಉತ್ತರ ಸಿಕ್ಕಿಂನ ಭಾರತ-ಚೀನಾ ಗಡಿಯಲ್ಲಿ ಚೀನಾದ ಸೈನಿಕರು ಗುಂಡು ಹಾರಾಟ ನಡೆಸಿ ಇಬ್ಬರು ಭಾರತೀಯ ಸೈನಿಕರನ್ನು ಗಾಯಗೊಳಿಸಿದ್ದಾರೆ ಎಂಬ ವರದಿ ಸುಳ್ಳು ಎಂದು ಪ್ರತಿಪಾದಿಸುತ್ತಿರುವ ಸರ್ಕಾರ, ಈ ವರದಿ ಮಾಡಿರುವ ಆಂಗ್ಲ ದೈನಿಕವೊಂದರ ಇಬ್ಬರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿರುವುದಾಗಿ ಹೇಳಲಾಗಿದೆ.
ಗುವಾಹಟಿ ಮತ್ತು ಕೋಲ್ಕತ್ತ ಮೂಲದ ಈ ಇಬ್ಬರು ಪತ್ರಕರ್ತರ ಮೇಲೆ ಇನ್ನೊಂದು ವಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಲಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತ ಟಿಬೆಟ್ ಗಡಿ ಪೊಲೀಸರು ಈ ಇಬ್ಬರು ಪತ್ರಕರ್ತರ ಮೇಲೆ ಈಗಾಗಲೇ ದೂರು ದಾಖಲಿಸಿಕೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.