ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಡ್ವಾಣಿ 'ಹಳಸಲು ಉಪ್ಪಿನಕಾಯಿಯಂತೆ': ಪರಿಕ್ಕರ್ (LK Advani | Manohar Parrikar | BJP | rancid pickle)
 
ಗೋವಾದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಮನೋಹರ್ ಪರಿಕ್ಕರ್ ಅವರು ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರನ್ನು ಕಮಟು ನಾತ ಬೀರುವ ಹಳೆಯ ಉಪ್ಪಿನಕಾಯಿಗೆ ಹೋಲಿಸಿದ್ದು, ಅವರ ರಾಜಕೀಯ ಇನ್ನಿಂಗ್ಸ್‌ಗಳು ಹೆಚ್ಚೂ ಕಮ್ಮಿ ಮುಗಿದಂತೆಯೇ ಎಂದು ಹೇಳಿದ್ದಾರೆ.

ಆಡ್ವಾಣಿ ಅವರು ಸಕ್ರಿಯ ರಾಜಕಾರಣದಲ್ಲಿ ಇನ್ನು ಕೆಲವೇ ಸಮಯವನ್ನು ಹೊಂದಿದ್ದಾರೆ ಎಂಬುದಾಗಿ ಗೋವಾದ ಮಾಜಿ ಮುಖ್ಯಮಂತ್ರಿ ಆಗಿರುವ ಪರಿಕ್ಕರ್ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

"ಒಂದುವರ್ಷ ಪಳಗಲು ಇರಿಸಿದರೆ ಉಪ್ಪಿನಕಾಯಿ ರುಚಿಯಾಗಿರುತ್ತದೆ. ಆದರೆ ಅದನ್ನು ಎರಡು ವರ್ಷಗಳಿಗೂ ಹೆಚ್ಚು ವರ್ಷ ಇರಿಸಿದರೆ ಅದು ಹಳಸಿ ಕೊಳೆಯುತ್ತದೆ... ಆಡ್ವಾಣಿಜಿಯವರ ಕಾಲ ಹೆಚ್ಚೂ ಕಮ್ಮಿ ಆಗಿಹೋಗಿದೆ. ಇನ್ನು ಇದ್ದರೂ ಅದು ಕೆಲವೇ ವರ್ಷ ಇರಬಹುದು. ಆದರೆ ಅವರು ಒಬ್ಬ ಮಾರ್ಗದರ್ಶಿ ಅಥವಾ ಒಬ್ಬ ಸಲಹಗಾರರಾಗಿ ಮುಂದುವರಿಯಬೇಕು" ಎಂಬುದಾಗಿ ಪರಿಕಾರ್ ಹೇಳಿದ್ದಾರೆ.

ಗೋವಾ ವಿಧಾನ ಸಭೆಯ ವಿಪಕ್ಷನಾಯಕರೂ ಆಗಿರುವ ಪರಿಕ್ಕರ್ ಅವರು, "ಸಮಗ್ರತೆ ಹಾಗೂ ಚಾರಿತ್ರ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಆಡ್ವಾಣಿ ಒಬ್ಬ ಶ್ರೇಷ್ಠ ನಾಯಕ. ಈ ವಿಚಾರದಲ್ಲಿ ಅವರ ಬಗ್ಗೆ ತನಗೆ ಅಪಾರವಾದ ಗೌರವವಿದೆ ಎಂದು ಹೇಳಿದ್ದಾರೆ.

ಪಕ್ಷದ ನಾಯಕತ್ವದಲ್ಲಿ ಬದಲಾವಣೆಗೆ ಕರೆ ನೀಡಿದ ಪರಿಕ್ಕರ್ ವಿಶ್ವಾಸಾರ್ಹ ಯುವನಾಯಕತ್ವ ಪಕ್ಷಕ್ಕೆ ಬೇಕಿದೆ ಎಂದು ಅಭಿಪ್ರಾಯಿಸಿದ್ದಾರೆ.

"ನಾನು ವಯಸ್ಸಾದ ನಾಯಕರ ವಿರೋಧಿಯಲ್ಲ. ಆದರೆ ಬಿಜೆಪಿಯು 40ರಿಂದ 60ರ ಹರೆಯದೊಳಗಿನ ನಾಯಕರಿಗೆ ಮಹತ್ವ ನೀಡಬೇಕು" ಎಂದು ಅವರು ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರ ಅವಧಿ ಡಿಸೆಂಬರ್‌ಗೆ ಕೊನೆಗೊಳ್ಳುತ್ತಿದ್ದು, ಪರಿಕ್ಕರ್ ಅವರನ್ನು ಸಿಂಗ್ ಅವರ ಉತ್ತರಾಧಿಕಾರಿ ಎಂಬುದಾಗಿ ಬಿಂಬಿಸಲಾಗಿದೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ