ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತ್ಯಾಚಾರ ಎಸಗಿ ಮಹಿಳೆಯನ್ನು ಸುಟ್ಟ ದುರುಳರು (Mumbai | Woman | Gangrape)
 
ಗೃಹಿಣಿಯೊಬ್ಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ನಾಲ್ವರು ದುರುಳರು ಆಕೆಯನ್ನು ಸುಟ್ಟು ಹಾಕಿರುವ ಭೀಕರ ಘಟನೆ ಸಂಭವಿಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಇಬ್ಬರು ಮಕ್ಕಳ ತಾಯಿ ಆಗಿರುವ ಮಹಿಳೆ ಅನೂಪ್ ಹಿಲ್‌ನ ತನ್ನ ಮನೆಯಲ್ಲಿ ಒಬ್ಬಳೇ ಇದ್ದ ವೇಳೆಗೆ ಮನೆಗೆ ನುಸುಳಿರುವ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರ ತಿಳಿದ ನೆರೆಮನೆಯವರು ಆಕೆಯನ್ನು ಸಿಯಾನ್ ಆಸ್ಪತ್ರೆಗೆ ಕರೆದೊಯ್ದರಾದರೂ ಆಕೆ ಬದುಕುಳಿಯಲಿಲ್ಲ. ಮರಣಶಯ್ಯೆಯಲ್ಲಿದ್ದ ಆಕೆಯ ಹೇಳಿಕೆಯನ್ನು ಪಡೆದಿರುವುದಾಗಿ ಪೊಲೀಸಧಿಕಾರಿ ಹೇಳಿದ್ದಾರೆ.

ಈಕೆ ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈಕೆಯ ಪತಿ ಚಾಲಕ ವೃತ್ತಿ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ