ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಐಎಎಫ್, ಇಸ್ರೋ ಬಳಕೆ (Naxals | IAF | ISRO | Govt)
 
ನಕ್ಸಲರ ಅಟ್ಟಹಾಸಕ್ಕೆ ತೆರೆಎಳೆಯಲು ಭಾರೀ ಕಾರ್ಯಾಚರಣೆಗೆ ಮುಂದಾಗಿರುವ ಸರ್ಕಾರ ಇದಕ್ಕಾಗಿ ಐಎಎಫ್ ಹೆಲಿಕಾಫ್ಟರ್‌ಗಳು ಮತ್ತು ಇಸ್ರೋದ ಸ್ಯಾಟಲೈಟ್ ಚಿತ್ರಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

ಈ ವರ್ಷದ ಅಂತ್ಯದಲ್ಲಿ ನಡೆಸಲುದ್ದೇಶಿಸಲಾಗಿರುವ ಕಾರ್ಯಾಚರಣೆಯ ನೇತೃತ್ವವನ್ನು ನಕ್ಸಲ್ ವಿರೋಧಿ ಪಡೆ ಕೋಬ್ರಾ ವಹಿಸಲಿದ್ದು, ರಾಜ್ಯ ಪೊಲೀಸರು, ಅರೆಸೇನಾಪಡೆಗಳು, ಸಿಆರ್‌ಪಿಎಫ್, ಬಿಎಸ್ಎಫ್ ಮತ್ತು ಐಟಿಬಿಪಿಗಳು ಸಹಕರಿಸಲಿವೆ ಎಂಬುದಾಗಿ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತೀಯ ವಾಯುಪಡೆಯು ಪಡೆಗಳ ಚಲಾವಣೆಗೆ ತನ್ನ ಹೆಲಿಕಾಫ್ಟರ್ ಒದಗಿಸುತ್ತಿರುವುದು ಈ ಕಾರ್ಯಾಚರಣೆಯ ಪ್ರಮುಖ ಅಂಶವಾಗಿದೆ. ಇನ್ನೊಂದು ಅಪೂರ್ವ ಲಕ್ಷಣವೆಂದರೆ ಇಸ್ರೋ ಉಪಗ್ರಹ ಚಿತ್ರಗಳನ್ನು ಈ ಕಾರ್ಯತಂತ್ರಕ್ಕಾಗಿ ಒದಗಿಸಲಿದೆ. ಇದಲ್ಲದೆ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯೂ ಸಹಾಯ ನೀಡಲಿದೆ.

ಕೋಬ್ರಾ ತಂಡವನ್ನು ಇದೀಗಾಗಲೇ ಹಲವಾರು ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದರೂ, ಇದೀಗ ತಮ್ಮ ಬೇಹುಗಾರಿಕಾ ಜಾಲವನ್ನು ವಿಸ್ತರಿಸುವ ಕುರಿತು ಗಮನ ಹರಿಸಿದೆ. ಬಿಎಸ್ಎಫ್‌ನ ಗುಪ್ತಚರ ದಳವನ್ನೂ ಸಹ ಈ ಪ್ರಸಕ್ತ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಸಂಬಂಧಿತ ಮಾಹಿತಿ ಹುಡುಕಿ