82ರ ವಯೋವೃದ್ಧ, ನಿವೃತ್ತ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಣ್ಣು ಹಣ್ಣು ಮುದುಕ ಮಾಡಿದ ಅಪರಾಧವೇನು? ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು! ಇದು ನಡೆದದ್ದು ವಿದೇಶದಲ್ಲಿ ಅಲ್ಲ, ತಮಿಳುನಾಡು ರಾಜಧಾನಿ ಚೆನ್ನೈಯಲ್ಲೇ.
ಲೈಂಗಿಕ ಕಿರುಕುಳದ ಬಗ್ಗೆ ಚೆನ್ನೈನ ಥೌಸೆಂಡ್ ಲೈಟ್ಸ್ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಗುಲಾಂ ಅಲಿ ಆಜಾದ್ ಅಲಿ ಖಾನ್ ಸ್ಟ್ರೀಟ್ ನಿವಾಸಿಯಾಗಿರುವ ಎ.ಕಾಸಿ ಎಂಬ ವೃದ್ಧರನ್ನು ಬಂಧಿಸಲಾಗಿದ್ದು, ಅವರಿಗೆ ತಮ್ಮ ಮನೆಯೆದುರು ಒಂದು ದಿನಸಿ ಸಾಮಗ್ರಿ ಅಂಗಡಿಯಿದೆ. ಈ ಬಾಲಕಿ ಏನೋ ತರಲೆಂದು ಸಾಯಂಕಾಲದ ಹೊತ್ತಿಗೆ ಈ ಅಂಗಡಿಗೆ ಬಂದಿದ್ದಾಗ, ಕಾಸಿ ಬಾಗಿಲು ಮುಚ್ಚಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ದೂರಲಾಗಿದೆ.
ಮಗಳೆಲ್ಲಿ ಹೋದಳು ಎಂದು ಹುಡುಕುತ್ತಾ ಬಂದ ಆಕೆಯ ಹೆತ್ತವರಿಗೆ, ಅಂಗಡಿಯೊಳಗಿಂದ ಮಗಳ ಅಳುವಿನ ಧ್ವನಿ ಕೇಳಿಸಿತ್ತು. ಆಕೆಯನ್ನು ಅವರು ರಕ್ಷಿಸಿದರು. ಇದೀಗ ಖಾಸಿ ಅಜ್ಜನಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಕೇಸಿನ ಸತ್ಯಾಸತ್ಯತೆ ಎಷ್ಟು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.